ಕನ್ನಡ ನಟಿ ಪ್ರಣೀತಾಗೆ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಪತ್ನಿಯಾಗುವ ಯೋಗ!

ಗುರುವಾರ, 22 ಆಗಸ್ಟ್ 2019 (10:03 IST)
ಬೆಂಗಳೂರು: ಅ‍ಪ್ಪಟ ಕನ್ನಡ ನಟಿ ಪ್ರಣೀತಾ ಈಗ ಬಾಲಿವುಡ್ ನಟ ಅಜಯ್ ದೇವಗನ್‍ ಗೆ ಪತ್ನಿಯಾಗುತ್ತಿದ್ದಾರೆ! ಅಂದರೆ ಸಿನಿಮಾವೊಂದರಲ್ಲಿ ಅಜಯ್ ಪತ್ನಿಯಾಗಿ ಅಭಿನಯಿಸಲಿದ್ದಾರೆ.


ಕನ್ನಡ ಹುಡುಗಿ ಈಗಾಗಲೇ ಬೇರೆ ಭಾಷೆಯಲ್ಲಿ ಮಿಂಚಿದ್ದಾಗಿದೆ. ಆದರೆ ಬಾಲಿವುಡ್ ನಲ್ಲಿ ಪ್ರಣೀತಾಗೆ ಇದು ಮೊದಲ ಸಿನಿಮಾ. ಅದೂ ಅಜಯ್ ದೇವಗನ್ ಗೆ ನಾಯಕಿ ಎನ್ನುವುದು ಹೆಗ್ಗಳಿಕೆಯೇ ಸರಿ.

ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಎಂಬ ದೇಶಭಕ್ತಿಯ ಕತೆಯುಳ್ಳ ಸಿನಿಮಾದಲ್ಲಿ ಪ್ರಣೀತಾ ಅಜಯ್ ಗೆ ನಾಯಕಿಯಾಗಿದ್ದಾಳೆ. ಇದು ಪಕ್ಕಾ ಹೋಮ್ಲೀ ಕ್ಯಾರೆಕ್ಟರ್ ಅಂತೆ. ಸೊನಾಕ್ಷಿ ಸಿನ್ಹಾ, ರಾಣಾ ದಗ್ಗುಬಟ್ಟಿ ಸೇರಿದಂತೆ ಬಹುತಾರಾಗಣವಿರುವ ಸಿನಿಮಾದಲ್ಲಿ ನಟಿಸುವ ಅದೃಷ್ಟ ಪ್ರಣೀತಾಗೆ ಕೂಡಿಬಂದಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗೋಲ್ಡನ್ ಸ್ಟಾರ್ ಗಣೇಶ್ ಗಾಗಿ ಹಾಡಿದ ಪುನೀತ್ ರಾಜ್ ಕುಮಾರ್