ಬಾಲಿವುಡ್ ನ ಖಾನ್ ಗಳಿಗೆ ಸವಾಲು ಹಾಕುತ್ತೀರಾ ಎಂದಿದ್ದಕ್ಕೆ ಪ್ರಭಾಸ್ ನೀಡಿದ ಉತ್ತರವೇನು ಗೊತ್ತಾ?

ಭಾನುವಾರ, 11 ಆಗಸ್ಟ್ 2019 (11:35 IST)
ಮುಂಬೈ: ಬಾಹುಬಲಿ ನಂತರ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಬಿಡುಗಡೆಯಾಗುತ್ತಿದೆ. ನಿನ್ನೆಯಷ್ಟೇ ಟ್ರೈಲರ್ ಬಿಡುಗಡೆಯಾಗಿ ಭಾರೀ ವೈರಲ್ ಆಗಿದೆ.


ಈ ಬಿಡುಗಡೆ ಸಮಾರಂಭದಲ್ಲಿ ಪ್ರಭಾಸ್ ಗೆ ವರದಿಗಾರ್ತಿಯೊಬ್ಬರು ನೀವು ಬಾಲಿವುಡ್ ನ ಶಾರುಖ್ ಖಾನ್, ಅಮೀರ್ ಖಾನ್ ಅವರಂತಹವ ಘಟಾನುಘಟಿಗಳಿಗೇ ಸವಾಲಾಗುತ್ತೀರಾ ಎಂದು ಪ್ರಶ್ನೆ ಕೇಳಿದರು.

ಬಹುಶಃ ಪ್ರಭಾಸ್ ಗೆ ಈ ಪ್ರಶ್ನೆ ಇಷ್ಟವಾಗಲಿಲ್ಲವೇನೋ. ಅದಕ್ಕೆ ಅವರು ‘ಧನ್ಯವಾದಗಳು ಮ್ಯಾಡಂ. ನಾನಿನ್ನು ಹೋಗಲೇ?’ ಎಂದು ಖಡಕ್ ಆಗಿ ಹೇಳಿ ವರದಿಗಾರ್ತಿಯನ್ನು ಸುಮ್ಮನಾಗಿಸಿದರು. ಇನ್ನು ಸಮಾರಂಭದಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡಿ ಎಂದಿದ್ದಕ್ಕೆ ಅಷ್ಟೇ ಜಾಣತನದಿಂದ ‘ಜೈ ಹಿಂದ್’ ಎಂದು ಹೇಳಿ ಸುಮ್ಮನಾದರು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸುನಿಲ್ ಶೆಟ್ಟಿ ಬರ್ತ್ ಡೇಗೆ ಕಿಚ್ಚ ಸುದೀಪ್ ವಿಶ್ ಮಾಡಿದ್ದು ಹೀಗೆ