Select Your Language

Notifications

webdunia
webdunia
webdunia
webdunia

ಗೋಲ್ಡನ್ ಸ್ಟಾರ್ ಗಣೇಶ್ ಗಾಗಿ ಹಾಡಿದ ಪುನೀತ್ ರಾಜ್ ಕುಮಾರ್

ಗೋಲ್ಡನ್ ಸ್ಟಾರ್ ಗಣೇಶ್ ಗಾಗಿ ಹಾಡಿದ ಪುನೀತ್ ರಾಜ್ ಕುಮಾರ್
ಬೆಂಗಳೂರು , ಗುರುವಾರ, 22 ಆಗಸ್ಟ್ 2019 (09:31 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಾಗ ಬೇರೆ ಸಿನಿಮಾಗಳಿಗೆ ಹಾಡುತ್ತಿರುತ್ತಾರೆ. ಹೀಗೆ ಹಾಡಿದ ಹಾಡುಗಳು ಹಿಟ್ ಕೂಡಾ ಆಗುತ್ತವೆ. ಇದೀಗ ಪುನೀತ್ ಗೋಲ್ಡನ್ ಸ್ಟಾರ್ ಗಣೇಶ್ ಗಾಗಿ ಹಾಡಿದ್ದಾರೆ.


ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾಗಾಗಿ ಹಾಡೊಂದನ್ನು ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ನಿನ್ನೆಯಷ್ಟೇ ಆ ಹಾಡಿನ ರೆಕಾರ್ಡ್ ಮುಗಿಸಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಗಣೇಶ್, ಪವರ್ ಸ್ಟಾರ್ ಗೆ ಧನ್ಯವಾದ ಸಲ್ಲಿಸಿದ್ದಾರೆ.

‘ಕನ್ನಡ ಕನ್ನಡ ಕನ್ನಡವೇ ಸತ್ಯ’ ಎಂಬ ಸಂತೋಷ್ ಆನಂದ್ ರಾಮ್ ಬರೆದ ಸ್ಪೂರ್ತಿದಾಯಕ ಹಾಡೊಂದನ್ನು ಪುನೀತ್ ಹಾಡಿದ್ದಾರೆ. ಸದ್ಯದಲ್ಲೇ ಅಡಿಯೋ ರಿಲೀಸ್ ಆಗಲಿದೆ. ಇನ್ನು, ಸಿನಿಮಾ ಸೆಪ್ಟೆಂಬರ್ 27 ರಂದು ಗೀತಾ ಸಿನಿಮಾ ತೆರೆಗೆ ಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನುಡಿದಂತೆ ನಡೆದ ಪೈಲ್ವಾನ್ ಚಿತ್ರತಂಡ: ಬಾದ್ ಶಹಾ ಎಂಟ್ರಿಗೆ ರಂಗ ಸಿದ್ಧತೆ