Select Your Language

Notifications

webdunia
webdunia
webdunia
webdunia

ನುಡಿದಂತೆ ನಡೆದ ಪೈಲ್ವಾನ್ ಚಿತ್ರತಂಡ: ಬಾದ್ ಶಹಾ ಎಂಟ್ರಿಗೆ ರಂಗ ಸಿದ್ಧತೆ

ಪೈಲ್ವಾನ್
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಪೈಲ್ವಾನ್ ಸಿನಿಮಾ ಟ್ರೈಲರ್ ಬಿಡುಗಡೆ ದಿನಾಂಕ ಘೋಷಿಸಬೇಕಾದರೆ ಈ ಟ್ವೀಟ್ ನನ್ನು 3000 ಕ್ಕೂ ಅಧಿಕ ಬಾರಿ ರಿಟ್ವೀಟ್ ಮಾಡಬೇಕು ಎಂದು ನಿರ್ಮಾಪಕರು ಷರತ್ತು ವಿಧಿಸಿದ್ದರು.


ಅದರಂತೆ ಕಿಚ್ಚನ ಅಭಿಮಾನಿಗಳು ಟ್ವೀಟ್ ನ್ನು 3000 ಕ್ಕೂ ಅಧಿಕ ಭಾರಿ ರಿಟ್ವೀಟ್ ಮಾಡಿ ತಮ್ಮ ಖದರ್ ತೋರಿಸಿದ್ದೇ ತಡ, ಚಿತ್ರತಂಡ ಭರವಸೆ ನೀಡಿದಂತೆಯೇ ಪೈಲ್ವಾನ್ ಟ್ರೈಲರ್ ಬಿಡುಗಡೆ ದಿನಾಂಕ ಪ್ರಕಟಿಸಿದೆ.

ಇಂದು ಮಧ್ಯಾಹ್ನ 1 ಗಂಟೆಗೆ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳ ಟ್ರೈಲರ್ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಕಿಚ್ಚನ ಅಭಿಮಾನಿಗಳಂತೂ ಈ ಸುದ್ದಿ ಕೇಳಿ ಭಾರೀ ಖುಷಿಯಾಗಿದ್ದು, ಬಾದ್ ಶಹಾ ಎಂಟ್ರಿಗೆ ಕಾಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶನ ಮೂರ್ತಿಯಲ್ಲೂ ಪೈಲ್ವಾನ್ ಕ್ರೇಜ್!