Select Your Language

Notifications

webdunia
webdunia
webdunia
webdunia

ವಿರಾಟ್ ಮೊದಲ ‘ಕಿಸ್’ಗೆ ರಾಕಿಂಗ್ ಸ್ಟಾರ್ ಯಶ್ ಸಾಥ್

ವಿರಾಟ್ ಮೊದಲ ‘ಕಿಸ್’ಗೆ ರಾಕಿಂಗ್ ಸ್ಟಾರ್ ಯಶ್ ಸಾಥ್
ಬೆಂಗಳೂರು , ಗುರುವಾರ, 22 ಆಗಸ್ಟ್ 2019 (09:14 IST)
ಬೆಂಗಳೂರು: ಕಿರುತೆರೆಯಲ್ಲಿ ಜೊತೆ ಜೊತೆಯಲಿ ಧಾರವಾಹಿ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ ನಟ ವಿರಾಟ್ ಈಗ ಕಿಸ್ ಸಿನಿಮಾ ಮೂಲಕ ಬೆಳ್ಳಿ ತೆರೆ ಪ್ರವೇಶಿಸುತ್ತಿದ್ದಾರೆ.


ವಿರಾಟ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಕಿಸ್ ಸಿನಿಮಾದ ಹಾಡುಗಳು ಈಗಾಗಲೇ ಭರ್ಜರಿ ಹಿಟ್ ಆಗಿವೆ. ಎಪಿ ಅರ್ಜುನ್ ನಿರ್ದೇಶನದ ಸಿನಿಮಾ ಈಗ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.

ಇದಕ್ಕೂ ಮೊದಲು ಅಂದರೆ ಸೆಪ್ಟೆಂಬರ್ 23 ರಂದು ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ನಡೆಸಿದೆ. ಅಂದ ಹಾಗೆ ಈ ಯೂಥ್ ಫುಲ್ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುತ್ತಿರುವವರು ಕಿರುತೆರೆಯಿಂದ ಹಿರಿತೆರೆಗೆ ಬಂದು ಇಂದು ಇಡೀ ದೇಶ ಗುರುತಿಸುವ ಹಾಗೆ ಬೆಳೆದಿರುವ ರಾಕಿಂಗ್ ಸ್ಟಾರ್ ಯಶ್. ವಿರಾಟ್ ಕೂಡಾ ಯಶ್ ರೀತಿಯೇ ಬೆಳ್ಳಿತೆರೆಯಲ್ಲಿ ಹೆಸರು ಮಾಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೋಗರಾಜ ಭಟ್-ಗಣೇಶ್ ಕಾಂಬಿನೇಷನ್ ನ ಗಾಳಿಪಟ2 ಗೆ ಈ ಖ್ಯಾತ ನಟನ ಎಂಟ್ರಿ?!