11 ವರ್ಷದ ವೃತ್ತಿ ಬದುಕಿನ ಬಗ್ಗೆ ಭಾವುಕರಾಗಿ ಪತ್ರ ಬರೆದ ವಿರಾಟ್ ಕೊಹ್ಲಿ: ರನ್ ಮೆಷಿನ್ ಗೆ ತವರೂರಿನ ಗಿಫ್ಟ್

ಸೋಮವಾರ, 19 ಆಗಸ್ಟ್ 2019 (10:11 IST)
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ 11 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಭಾವುಕರಾಗಿ ಸಂದೇಶ ಬರೆದಿದ್ದಾರೆ.


ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಳೆಯ ಫೋಟೋವೊಂದನ್ನು ಪ್ರಕಟಿಸಿರುವ ಕೊಹ್ಲಿ 2008 ರಲ್ಲಿ ಇದೇ ದಿನ ಟೀನೇಜರ್ ಆಗಿ ನನ್ನ ದಿನ ಆರಂಭಿಸಿದ್ದೆ, ಇಂದು 2019 ರವರೆಗೆ 11 ವರ್ಷದ ಯಾತ್ರೆ ಮುಗಿಸಿದ್ದೇನೆ. ನನ್ನ ಮೇಲೆ ನೀವು ಇಷ್ಟೊಂದು ಪ್ರೀತಿ, ಹಾರೈಕೆ ಇಡುತ್ತೀರಿ ಎಂದು ಕಲ್ಪನೆಯೂ ಮಾಡಿರಲಿಲ್ಲ. ನಿಮಗೆಲ್ಲರಿಗೂ ಸದಾ ಚಿರಋಣಿ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

ಇನ್ನು, ಕೊಹ್ಲಿ ವೃತ್ತಿ ಬದುಕಿಗೆ 11 ವರ್ಷ ಪೂರೈಸಿದ ಬೆನ್ನಲ್ಲೇ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಸ್ಟ್ಯಾಂಡ್ ಒಂದಕ್ಕೆ ಕೊಹ್ಲಿ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ. ಈ ಮೂಲಕ ತವರಿನ ಹುಡುಗನಿಗೆ ಗೌರವ ನೀಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಗೆ ಬೌಲಿಂಗ್ ಏಟು: ಕೂದಲೆಳೆಯಲ್ಲಿ ತಪ್ಪಿದ ಅನಾಹುತ