ಕೋಚ್ ಆಯ್ಕೆ ಸಂದರ್ಶನದ ವೇಳೆಯೇ ಬೇಡಿಕೆ ಮುಂದಿಟ್ಟಿದ್ದ ರವಿಶಾಸ್ತ್ರಿ

ಶನಿವಾರ, 17 ಆಗಸ್ಟ್ 2019 (11:06 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಯ್ಕೆ ಸಂದರ್ಶನದ ವೇಳೆ ಹಾಲಿ ಕೋಚ್ ಆಗಿರುವ ರವಿಶಾಸ್ತ್ರಿ ಕಪಿಲ್ ದೇವ್ ನೇತೃತ್ವದ ಆಯ್ಕೆ ಸಮಿತಿ ಮುಂದೆ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರಂತೆ.


ಇನ್ನು ಮುಂದೆ ತಂಡದ ಆಟಗಾರರ ಆಯ್ಕೆ ವಿಚಾರದಲ್ಲಿ ಕೋಚ್ ಕೂಡಾ ಉಪಸ್ಥಿತರಿಲು ಮತ್ತು ಸಲಹೆ ಕೊಡಲು ಅವಕಾಶ ನೀಡಬೇಕು ಎಂದು ರವಿಶಾಸ್ತ್ರಿ ಬೇಡಿಕೆಯಿಟ್ಟಿದ್ದಾರಂತೆ. ಕಳೆದ ಕೆಲವು ಸಮಯದಿಂದ ಕೋಚ್ ನ್ನು ಆಯ್ಕೆ ಸಮಿತಿ ಸಭೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕೇವಲ ನಾಯಕ ಮಾತ್ರ ಆಯ್ಕೆ ಸಮಿತಿ ಸಭೆ ವೇಳೆ ಉಪಸ್ಥಿತರಿರುತ್ತಾರೆ.

ಇದು ತಂಡದ ಮ್ಯಾನೇಜ್ ಮೆಂಟ್ ಗೆ ಅಸಮಾಧಾನ ತಂದಿದೆ ಎನ್ನಲಾಗಿದ್ದು, ವಿಶ್ವಕಪ್ ಸೇರಿದಂತೆ ವಿವಿಧ ಟೂರ್ನಿಗಳ ವೇಳೆ ತಮಗೆ ಬೇಕಾದ ಆಟಗಾರರು ಆಯ್ಕೆಯಾಗುತ್ತಿಲ್ಲ ಎನ್ನುವುದು ತಂಡದ ಮ್ಯಾನೇಜ್ ಮೆಂಟ್ ಆರೋಪ. ಇದೇ ಕಾರಣಕ್ಕೆ ರವಿಶಾಸ್ತ್ರಿ ಸಂದರ್ಶನದ ವೇಳೆಯೇ ಈ ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರವಿಶಾಸ್ತ್ರಿಯನ್ನೇ ಆಯ್ಕೆ ಮಾಡುವುದಾದರೆ ಇಷ್ಟೆಲ್ಲಾ ನಾಟಕ ಬೇಕಿತ್ತಾ?!