Publish Date: Sat, 17 Aug 2019 (10:44 IST)
Updated Date: Sat, 17 Aug 2019 (10:47 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿಯವರನ್ನೇ ಮುಂದುವರಿಸಿರುವ ಕಪಿಲ್ ದೇವ್ ನೇತೃತ್ವದ ಆಯ್ಕೆ ಸಮಿತಿ ನಿರ್ಧಾರವನ್ನು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಟೀಂ ಇಂಡಿಯಾಗೆ ಹೊಸ ಕೋಚ್ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಮತ್ತೆ ರವಿಶಾಸ್ತ್ರಿಯನ್ನೇ ಮಂದುವರಿಸಿರುವುದು ಅಷ್ಟೊಂದು ಇಷ್ಟವಾದಂತೆ ತೋರುತ್ತಿಲ್ಲ. ಅವರನ್ನೇ ಮುಂದುವರಿಸುವುದಾದರೆ ಇಷ್ಟೆಲ್ಲಾ ನಾಟಕ ಬೇಕಿತ್ತಾ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ್ದಾರೆ.
ಕೆಲವರು ರವಿಶಾಸ್ತ್ರಿ ಕಾಮೆಂಟರಿ ಅದ್ಭುತ, ಆದರೆ ಕೋಚ್ ಆಗಿ ಅಲ್ಲ ಎಂದರೆ ಮತ್ತೆ ಕೆಲವರು ಆಯ್ತು ಬಿಡಿ, ಇನ್ನು ಟಿ20 ವಿಶ್ವಕಪ್ ನಲ್ಲೇ ಸೋಲೇ ಗ್ಯಾರಂಟಿ ಎಂದಿದ್ದಾರೆ. ಮತ್ತೆ ಕೆಲವರು ನಿಜವಾಗಿಯೂ ಈಗೀಗ ಈ ರೀತಿಯ ರಾಜಕೀಯ ನೋಡಿ ಕ್ರಿಕೆಟ್ ನೋಡುವುದನ್ನೇ ಬಿಟ್ಟಿದ್ದೇವೆ ಎಂದಿದ್ದಾರೆ. ಮತ್ತೆ ಕೆಲವರು ನಿಜವಾಗಿಯೂ ಕೋಚ್ ಆಯ್ಕೆ ಮಾಡಬೇಕಿದ್ದರೆ ದ್ರಾವಿಡ್, ಅನಿಲ್ ಕುಂಬ್ಳೆ ಅಥವಾ ಗಂಗೂಲಿಯಂತಹ ಪ್ರತಿಭಾವಂತರವನ್ನು ಆಯ್ಕೆ ಮಾಡಿ. ಅದರ ಬದಲು ಇಂತಹವರನ್ನು ಆಯ್ಕೆ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.