ರಿಕಿ ಪಾಂಟಿಂಗ್ ದಾಖಲೆ ಮುರಿಯಲು ಸಜ್ಜಾಗಿರುವ ವಿರಾಟ್ ಕೊಹ್ಲಿ

ಬುಧವಾರ, 21 ಆಗಸ್ಟ್ 2019 (09:31 IST)
ಆಂಟಿಗುವಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಾಳೆಯಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆಯೊಂದನ್ನು ಬರೆಯಲು ಸಜ್ಜಾಗಿದ್ದಾರೆ.


ಟೆಸ್ಟ್ ಕ್ರಿಕೆಟ್ ನಲ್ಲಿ ನಾಯಕನಾಗಿ ಅತೀ ಹೆಚ್ಚು ಶತಕ ಗಳಿಸಿದ ದಾಖಲೆ ದ.ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಹೆಸರಿನಲ್ಲಿದೆ. ಅವರು 25 ಶತಕ ದಾಖಲಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿ ರಿಕಿ ಪಾಂಟಿಂಗ್ 19 ಶತಕಗಳಿಂದ ಎರಡನೇ ಸ್ಥಾನದಲ್ಲಿದ್ದಾರೆ.

ಇದೀಗ ವಿರಾಟ್ ಕೊಹ್ಲಿ ರಿಕಿ ಪಾಂಟಿಂಗ್ ದಾಖಲೆ ಮುರಿಯಲು ಸಜ್ಜಾಗಿದ್ದಾರೆ. ಕೊಹ್ಲಿ ಸದ್ಯಕ್ಕೆ 18 ಶತಕ ಸಿಡಿಸಿದ್ದಾರೆ. ಇನ್ನು ಎರಡು ಶತಕ ದಾಖಲಿಸಿದರೆ ಪಾಂಟಿಂಗ್ ದಾಖಲೆ ಮುರಿಯಲಿದ್ದಾರೆ. ಸದ್ಯದ ಫಾರ್ಮ್ ಗಮನಿಸಿದರೆ ಕೊಹ್ಲಿಗೆ ಈ ಸಾಧನೆ ಮಾಡುವುದು ಕಷ್ಟವೇನೂ ಅಲ್ಲ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಾರತೀಯ ಯುವತಿಯನ್ನು ವಿವಾಹವಾಗುತ್ತಿರುವ ಪಾಕ್ ಕ್ರಿಕೆಟಿಗನನ್ನು ಟ್ರೋಲ್ ಮಾಡಿದ ಸಾನಿಯಾ ಮಿರ್ಜಾ