ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಉಗ್ರ ದಾಳಿ ಭೀತಿ: ಪಾಕ್ ಕ್ರಿಕೆಟ್ ಮಂಡಳಿಗೆ ಬಂದ ಈಮೇಲ್

ಸೋಮವಾರ, 19 ಆಗಸ್ಟ್ 2019 (10:22 IST)
ನವದೆಹಲಿ: ವೆಸ್ಟ್ ಇಂಡೀಸ್ ನಲ್ಲಿ ಕ್ರಿಕೆಟ್ ಸರಣಿ ಆಡಲು ತೆರಳಿರುವ ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಉಗ್ರ ದಾಳಿಯಾಗುವ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಈಮೇಲ್ ಒಂದು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.


ಪಾಕ್ ಕ್ರಿಕೆಟ್ ಮಂಡಳಿಯ ಈಮೇಲ್ ಗೆ ಅನಾಮಿಕ ಪತ್ರವೊಂದು ಬಂದಿದ್ದು, ವಿಂಡೀಸ್ ನಲ್ಲಿರುವ ಭಾರತೀಯ ಕ್ರಿಕೆಟಿಗರ ಮೇಲೆ ಯಾವುದೇ ಕ್ಷಣದಲ್ಲೂ ದಾಳಿಯಾಗಬಹುದು ಎಂದು ಬರೆಯಲಾಗಿದೆ. ಆದರೆ ಯಾವುದೇ ಉಗ್ರ ಸಂಘಟನೆಯ ಹೆಸರು ಇದರಲ್ಲಿ ಉಲ್ಲೇಖವಾಗಿಲ್ಲ. ಇದನ್ನು ತಕ್ಷಣವೇ ಪಾಕ್ ಮಂಡಳಿ ಐಸಿಸಿಗೆ ಫಾರ್ವರ್ಡ್ ಮಾಡಿದೆ. ಈ ಈಮೇಲ್ ಪತ್ರದ ಪ್ರತಿ ಈಗ ಬಿಸಿಸಿಐಗೂ ತಲುಪಿದೆ.

ಇದನ್ನು ಬಿಸಿಸಿಐ ಕೇಂದ್ರ ಗೃಹ ಸಚಿವಾಯಲದ ಗಮನಕ್ಕೂ ತಂದಿದೆ. ಈ ಸಂಬಂಧ ಕೇಂದ್ರ ಗೃಹ ಇಲಾಖೆ ಆಂಟಿಗುವಾದಲ್ಲಿರುವ ರಾಯಭಾರಿ ಇಲಾಖೆಗೆ ಮಾಹಿತಿ ನೀಡಿದ್ದು, ಭದ್ರತೆ ಕೈಗೊಳ್ಳುವಂತೆ ಸೂಚಿಸಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 11 ವರ್ಷದ ವೃತ್ತಿ ಬದುಕಿನ ಬಗ್ಗೆ ಭಾವುಕರಾಗಿ ಪತ್ರ ಬರೆದ ವಿರಾಟ್ ಕೊಹ್ಲಿ: ರನ್ ಮೆಷಿನ್ ಗೆ ತವರೂರಿನ ಗಿಫ್ಟ್