ಉಗ್ರರ ಬೆದರಿಕೆ ಹಿನ್ನಲೆ: ಟೀಂ ಇಂಡಿಯಾಗೆ ಟೈಟ್ ಸೆಕ್ಯೂರಿಟಿ

ಮಂಗಳವಾರ, 20 ಆಗಸ್ಟ್ 2019 (09:42 IST)
ಆಂಟಿಗುವಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಉಗ್ರರ ದಾಳಿ ಬೆದರಿಕೆ ಹಿನ್ನಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.


ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಮೇಲ್ ವಿಳಾಸಕ್ಕೆ ಅನಾಮಧೇಯ ಪತ್ರವೊಂದು ಬಂದಿತ್ತು. ಇದರಲ್ಲಿ ವಿಂಡೀಸ್ ನಲ್ಲಿರುವ ಟೀಂ ಇಂಡಿಯಾ ಮೇಲೆ ಯಾವುದೇ ಕ್ಷಣದಲ್ಲಾದರೂ ದಾಳಿಯಾಗಬಹುದು ಎಂದು ಬೆದರಿಕೆ ಹಾಕಲಾಗಿತ್ತು. ಈ ಈಮೇಲ್ ನ್ನು ಪಿಸಿಬಿ ಐಸಿಸಿಗೆ ಫಾರ್ವರ್ಡ್ ಮಾಡಿತ್ತು. ಈ ವಿಚಾರವನ್ನು ಬಿಸಿಸಿಐ ಕೇಂದ್ರ ಗೃಹ ಇಲಾಖೆ ಗಮನಕ್ಕೆ ತಂದಿತ್ತು.

ಹೀಗಾಗಿ ಆಂಟಿಗುವಾದಲ್ಲಿರುವ ರಾಯಭಾರಿ ಕಚೇರಿಗೆ ಕೇಂದ್ರ ಗೃಹ ಇಲಾಖೆ  ಸೂಚನೆ ನೀಡಿತ್ತು. ಅದರಂತೆ ಈಗ ವಿಂಡೀಸ್ ನಲ್ಲಿರುವ ಭಾರತ ತಂಡ ಉಳಿದುಕೊಳ್ಳುವ ಹೋಟೆಲ್, ಮೈದಾನ ಸೇರಿದಂತೆ ಎಲ್ಲೆಡೆ ಬಿಗಿ ಭದ್ರತೆ ಒದಗಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಉಗ್ರ ದಾಳಿ ಭೀತಿ: ಪಾಕ್ ಕ್ರಿಕೆಟ್ ಮಂಡಳಿಗೆ ಬಂದ ಈಮೇಲ್