Select Your Language

Notifications

webdunia
webdunia
webdunia
webdunia

ಪೈಲ್ವಾನ್ ಟ್ರೈಲರ್ ಬಿಡುಗಡೆ ಮಾಡಬೇಕಾದರೆ ಅಭಿಮಾನಿಗಳಿಗೆ ಕಂಡೀಷನ್ ಅಪ್ಲೈ!

ಪೈಲ್ವಾನ್
ಬೆಂಗಳೂರು:ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದೆ. ಆದರೆ ಟ್ರೈಲರ್ ಇನ್ನೂ ಬಿಡುಗಡೆಯಾಗಿಲ್ಲ. ಟ್ರೈಲರ್ ಬಿಡುಗಡೆಯಾಗಬೇಕಾದರೆ ಅಭಿಮಾನಿಗಳು ಒಂದು ಕೆಲಸ ಮಾಡಬೇಕಾಗಿದೆ!


ಪೈಲ್ವಾನ್ ಟ್ರೈಲರ್ ಬಿಡುಗಡೆಗೆ ನಿರ್ಮಾಪಕಿ ಸ್ವಪ್ನ ಕೃಷ್ಣ ಷರತ್ತು ಹಾಕಿದ್ದಾರೆ. ಸ್ವಪ್ನ ಕೃಷ್ಣ ಟ್ವೀಟ್ ಒಂದನ್ನು ಮಾಡಿದ್ದು ಆ ಟ್ವೀಟ್ ಗೆ 3000 ಕ್ಕೂ ಅಧಿಕ ರಿಟ್ವೀಟ್ ಮಾಡಿದರೆ ಪೈಲ್ವಾನ್ ಟ್ರೈಲರ್ ಬಿಡುಗಡೆ ದಿನಾಂಕ ಪ್ರಕಟಿಸುವುದಾಗಿ ಷರತ್ತು ವಿಧಿಸಿದ್ದಾರೆ.

ಅಷ್ಟೇ ಅಲ್ಲ, ದಿನಾಂಕವನ್ನು ಸರಿಯಾಗಿ ಗೆಸ್ ಮಾಡಿದ ಐದು ಅದೃಷ್ಟಶಾಲಿ ವಿಜೇತರಿಗೆ ವಿಶೇಷ ಬಹುಮಾನವೂ ಕಾದಿದೆಯಂತೆ. ಈ ಮೂಲಕ ವಿಶಿಷ್ಟವಾಗಿ ತಮ್ಮ ಚಿತ್ರಕ್ಕೆ ಪ್ರಚಾರ ಒದಗಿಸುತ್ತಿದ್ದಾರೆ. ಈಗಾಗಲೇ ಟ್ವೀಟ್ 3000 ಕ್ಕೂ ಅಧಿಕ ರಿಟ್ವೀಟ್ ಆಗಿದೆ. ಈಗ ದಿನಾಂಕ ಘೋಷಿಸುವ ಸರದಿ ನಿರ್ಮಾಪಕರದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಹಿಮಾಲಯದಲ್ಲಿ ಸಿಲುಕಿಕೊಂಡ ಮಲಯಾಳ ನಟಿ ಮಂಜುವಾರಿಯರ್