Select Your Language

Notifications

webdunia
webdunia
webdunia
webdunia

ಗಣೇಶನ ಮೂರ್ತಿಯಲ್ಲೂ ಪೈಲ್ವಾನ್ ಕ್ರೇಜ್!

ಗಣೇಶನ ಮೂರ್ತಿಯಲ್ಲೂ ಪೈಲ್ವಾನ್ ಕ್ರೇಜ್!
ಬೆಂಗಳೂರು , ಗುರುವಾರ, 22 ಆಗಸ್ಟ್ 2019 (09:21 IST)
ಬೆಂಗಳೂರು: ಗಣೇಶ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈಗಾಗಲೇ ಹಬ್ಬಕ್ಕೆ ಯಾವ ರೀತಿಯ ಗಣೇಶ ಕೂರಿಸಬೇಕೆಂದು ಲೆಕ್ಕಾಚಾರ ಶುರುವಾಗಿದೆ. ಮಾರುಕಟ್ಟೆಯಲ್ಲೂ ಈಗಾಗಲೇ ಗಣೇಶನ ಮೂರ್ತಿಗಳು ಹೊರಬರತೊಡಗಿವೆ.


ಅದರ ಮಧ್ಯೆ ವಿಶಿಷ್ಟ ಗಣೇಶನ ಮೂರ್ತಿಯೊಂದು ಗಮನ ಸೆಳೆಯುತ್ತಿದೆ. ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಕ್ರೇಜ್ ಎಲ್ಲೆಲ್ಲೂ ಹರಡಿದ್ದು, ಈಗ ಕಿಚ್ಚನ ಅಭಿಮಾನಿಯೊಬ್ಬರು ಪೈಲ್ವಾನ್ ಗಣೇಶನ ಮೂರ್ತಿ ಮಾಡಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ವತಃ ಸುದೀಪ್ ಅಭಿಮಾನಿಗಳ ಪೈಲ್ವಾನ್ ಕ್ರೇಜ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ನೆಚ್ಚಿನ ನಟನ ಮೇಲೆ ಅಭಿಮಾನಿಗಳು ಅಕ್ಕರೆ ತೋರುವುದು ಸಹಜ. ಆದರೆ ಈ ಅಭಿಮಾನಿಗಳು ಗಣೇಶನ ಮೂರ್ತಿಯಲ್ಲೂ ತಮ್ಮ ನೆಚ್ಚಿನ ನಟನ ಸಿನಿಮಾದ ಕ್ರೇಜ್ ತೋರಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಮೊದಲ ‘ಕಿಸ್’ಗೆ ರಾಕಿಂಗ್ ಸ್ಟಾರ್ ಯಶ್ ಸಾಥ್