Select Your Language

Notifications

webdunia
webdunia
webdunia
webdunia

ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಕಿಚ್ಚ ಸುದೀಪ್ ಲಾಯರ್

ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಕಿಚ್ಚ ಸುದೀಪ್ ಲಾಯರ್
ಬೆಂಗಳೂರು , ಸೋಮವಾರ, 19 ಆಗಸ್ಟ್ 2019 (09:22 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಹೊಸದಾಗಿ ನಿರ್ದೇಶಿಸಿ, ಅಭಿನಯಿಸುತ್ತಿರುವ ರವಿ ಬೋಪಣ್ಣ ಎಂಬ ಸಿನಿಮಾದಲ್ಲಿ ಕಿಚ್ಚ ಸುದೀಪ್ ಪಾತ್ರ ಮಾಡುತ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು.


ಅದೀಗ ನಿಜವಾಗಿದೆ. ಕಿಚ್ಚ ಸುದೀಪ್ ಪಾತ್ರವೇನಿರಬಹುದು? ನಿಜವಾಗಿಯೂ ಕಿಚ್ಚ ಪಾತ್ರ ಮಾಡುತ್ತಾರಾ ಅಥವಾ ಬೇರೆ ಯಾವುದಾದರೂ ರೀತಿಯಲ್ಲಿ ಸಿನಿಮಾದಲ್ಲಿ ಜತೆಯಾಗುತ್ತಿದ್ದಾರಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಈ ಉತ್ತರ ಸಿಕ್ಕಿದೆ.

ಕ್ರೇಜಿಸ್ಟಾರ್ ಸಿನಿಮಾದಲ್ಲಿ ಕಿಚ್ಚ ಲಾಯರ್ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕಿಚ್ಚನ ಲಾಯರ್ ಲುಕ್ ನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ರವಿಚಂದ್ರನ್ ಆಗಾಗ ಕಿಚ್ಚ ಸುದೀಪ್ ರನ್ನು ತಮ್ಮ ಮಗನ ಸಮಾನ ಎನ್ನುತ್ತಿರುತ್ತಾರೆ. ಅದರಂತೆ ಈ ಜೋಡಿ ಇದೀಗ ಎರಡನೇ ಬಾರಿಗೆ ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ರವಿಚಂದ್ರನ್ ನಿರ್ದೇಶನದಲ್ಲಿ ನಟಿಸುವುದೇ ಒಂದು ಖುಷಿ ಎಂದು ಕಿಚ್ಚ ಹೇಳಿಕೊಂಡಿದ್ದಾರೆ. ಅಂದ ಹಾಗೆ ಕಿಚ್ಚನ ಪಾತ್ರ ಕೇವಲ ಕ್ಲೈಮ್ಯಾಕ್ಸ್ ನಲ್ಲಿ ಮಾತ್ರ ಬರಲಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಮಕ್ಕಳ ನೃತ್ಯ ನೋಡಿ ಬೆರಗಾದ ಕಿಚ್ಚ ಸುದೀಪ್ ಹೇಳಿದ್ದೇನು?