Publish Date: Fri, 23 Aug 2019 (09:24 IST)
Updated Date: Fri, 23 Aug 2019 (09:37 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪೈಲ್ವಾನ್ ಸಿನಿಮಾದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಟ್ರೈಲರ್ ನೋಡಿದ ಚಿತ್ರರಂಗದ ಗಣ್ಯರು ಕಿಚ್ಚನಿಗೆ ಶುಭ ಹಾರೈಸಿದ್ದಾರೆ.
ಕಿಚ್ಚನ ಪೈಲ್ವಾನ್ ಅವತಾರ, ಖದರ್, ಕಿಚ್ಚು ನೋಡಿ ಅಭಿಮಾನಿಗಳ ಜತೆಗೆ ಚಿತ್ರರಂಗದ ಸ್ನೇಹಿತರೂ ಮಾರು ಹೋಗಿದ್ದಾರೆ. ಈ ಸಿನಿಮಾದಲ್ಲಿ ಮತ್ತೆ ಸುದೀಪ್ ಮರಳಿದ್ದಾರೆ ಎನ್ನಬಹುದು. ಟ್ರೈಲರ್ ಈ ಮಟ್ಟಿಗೆ ಖಡಕ್ ಆಗಿರುವುದಕ್ಕೆ ಸ್ಯಾಂಡಲ್ ವುಡ್ ಮಾತ್ರವಲ್ಲದೆ, ತೆಲುಗು, ತಮಿಳು ಮತ್ತು ಹಿಂದಿಯಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.
ಬಾಹುಬಲಿ ನಿರ್ದೇಶಕ ರಾಜಮೌಳಿ, ಶಿವಕಾರ್ತಿಕೇಯನ್, ರಿಷಬ್ ಶೆಟ್ಟಿ, ಸಂತೋಷ್ ಆನಂದ್ ರಾಮ್ ಸೇರಿದಂತೆ ಎಲ್ಲರೂ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರೈಲರೇ ಇಷ್ಟು ಸದ್ದು ಮಾಡುತ್ತಿರಬೇಕಾದರೆ ಸಿನಿಮಾ ಹೇಗಿರಬಹುದು ಎಂದು ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ.