Select Your Language

Notifications

webdunia
webdunia
webdunia
webdunia

ಪ್ರಭಾಸ್ ಗೆ ಇಷ್ಟವಾದ ಕನ್ನಡ ಸಿನಿಮಾ ಯಾವುದು ಗೊತ್ತಾ?

ಪ್ರಭಾಸ್ ಗೆ ಇಷ್ಟವಾದ ಕನ್ನಡ ಸಿನಿಮಾ ಯಾವುದು ಗೊತ್ತಾ?
ಬೆಂಗಳೂರು , ಭಾನುವಾರ, 25 ಆಗಸ್ಟ್ 2019 (09:15 IST)
ಬೆಂಗಳೂರು: ಸಾಹೋ ಬಹುಭಾಷೆಯಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಇದರ ಬೆನ್ನಲ್ಲೇ ಪ್ರಭಾಸ್ ಈಗ ಎಲ್ಲಾ ರಾಜ್ಯಗಳಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.


ಬೆಂಗಳೂರಿನಲ್ಲಿ ನಡೆದ ಸಾಹೋ ಪ್ರಮೋಷನ್ ಕಾರ್ಯಕ್ರಮದಲ್ಲಿ ಪ್ರಭಾಸ್ ಕನ್ನಡ ಸಿನಿಮಾ ಅದರಲ್ಲೂ ವಿಶೇಷವಾಗಿ ರಾಜ್ ಕುಮಾರ್ ಸಿನಿಮಾ ಬಗ್ಗೆ ಅಭಿಮಾನದಿಂದ ಮಾತನಾಡಿದ್ದಾರೆ.

ಭಕ್ತಿ ಪ್ರಧಾನ ಚಿತ್ರವೊಂದರಲ್ಲಿ ನಟಿಸಬೇಕೆಂದರೆ ಕನ್ನಡ ಚಿತ್ರರಂಗದಲ್ಲಿ ಅನೇಕ ಭಕ್ತಿಪ್ರಧಾನ ಸಿನಿಮಾಗಳು ಬಂದಿವೆ. ಅದರಲ್ಲೂ ಡಾ. ರಾಜ್ ಕುಮಾರ್ ಅವರ ಸಿನಿಮಾಗಳ ಅಭಿಮಾನಿ ನಾನು. ಬೇಡರ ಕಣ್ಣಪ್ಪ ನನಗೆ ಅಚ್ಚುಮೆಚ್ಚಿನ ಸಿನಿಮಾ. ಅಂತಹ ಪಾತ್ರವನ್ನು ಭವಿಷ್ಯದಲ್ಲಿ ಮಾಡಬೇಕೆಂಬ ಕನಸಿದೆ ಎಂದು ಪ್ರಭಾಸ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಜತೆಗೆ ಕಿಚ್ಚ ಸುದೀಪ್ ಕುಸ್ತಿ!