Select Your Language

Notifications

webdunia
webdunia
webdunia
webdunia

ಬಾಹುಬಲಿ 3 ಮಾಡ್ತಾರಾ ರಾಜಮೌಳಿ? ಪ್ರಭಾಸ್ ಹೇಳಿದ್ದೇನು?

ಬಾಹುಬಲಿ
ಬೆಂಗಳೂರು: ಬಾಹುಬಲಿ 1 ಮತ್ತು 2 ನೇ ಭಾಗದ ಅಭೂತಪೂರ್ವ ಯಶಸ್ಸಿನ ಬಳಿಕ ಬಾಹುಬಲಿ 3 ನೇ ಭಾಗವೂ ಆಗಲಿ ಎಂದು ಎಷ್ಟೋ ಅಭಿಮಾನಿಗಳು ಆಶಿಸಿದ್ದಾರೆ. ಆದರೆ ನಿಜವಾಗಿ ನಿರ್ದೇಶಕ ರಾಜಮೌಳಿ ತಲೆಯಲ್ಲಿ 3 ನೇ ಭಾಗ ಮಾಡುವ ಬಗ್ಗೆ ಯೋಜನೆ ಓಡಾಡುತ್ತಿದೆಯಾ?


ಈ ಬಗ್ಗೆ ಸಾಹೋ ಪ್ರಚಾರದ ನಡುವೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಯಕ ಪ್ರಭಾಸ್ ಗೆ ಕೇಳಲಾಯಿತು. ಬಾಹುಬಲಿ ಮೂಲಕ ದೇಶದಾದ್ಯಂತ ಮನೆ ಮಾತಾದ ಪ್ರಭಾಸ್ ಗೆ ಬಾಹುಬಲಿ 3 ಮಾಡುವ ಯೋಚನೆಯಿದೆಯಾ ಎಂಧು ಪ್ರಶ್ನಿಸಿದ್ದಕ್ಕೆ ಅವರು ಉತ್ತರಿಸಿದ್ದು ಹೀಗೆ.

‘ಬಾಹುಬಲಿ 2 ಮಾಡುವಾಗಲೇ ಮೂರನೇ ಭಾಗ ಮಾಡುವಷ್ಟು ಸ್ಕ್ರಿಪ್ಟ್ ರಾಜಮೌಳಿ ಬಳಿಯಿತ್ತು. ನನಗೆ ಗೊತ್ತು, ಅವರ ಬಳಿ ಕತೆಯಿದೆಯೆಂದು. ಆದರೆ ಅದನ್ನು ಮಾಡ್ತಾರಾ ಎಂಬುದು ಸದ್ಯಕ್ಕೆ ಗೊತ್ತಿಲ್ಲ’ ಎಂದು ಪ್ರಭಾಸ್ ಹೇಳಿದ್ದಾರೆ. ಯಾರಿಗೆ ಗೊತ್ತು? ಈಗ ರಾಜಮೌಳಿ ನಿರ್ದೇಶಿಸುತ್ತಿರುವ ತ್ರಿಬಲ್ ಆರ್ ಸಿನಿಮಾ ಬಳಿಕ ಬಾಹುಬಲಿ 3 ಮಾಡಿದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾಸ್ ಗೆ ಇಷ್ಟವಾದ ಕನ್ನಡ ಸಿನಿಮಾ ಯಾವುದು ಗೊತ್ತಾ?