Select Your Language

Notifications

webdunia
webdunia
webdunia
webdunia

‘ತಲೈವಿ’ ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡಿಕೆ

‘ತಲೈವಿ’ ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡಿಕೆ
ಚೆನ್ನೈ , ಶನಿವಾರ, 10 ಏಪ್ರಿಲ್ 2021 (11:08 IST)
ಚೆನ್ನೈ : ಕಂಗನಾ ರನೌತ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ ತಮಿಳುನಾಡಿನ ಪ್ರಸಿದ್ಧ ರಾಜಕಾರಣಿ ದಿ. ಜಯಲಲಿತಾ ಅವರ ಜೀವನಚರಿತ್ರೆಯನ್ನಾಧರಿಸಿದ ಚಿತ್ರ ‘ತಲೈವಿ’ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ.

ಈ ಚಿತ್ರವನ್ನು ಏಪ್ರಿಲ್ 23ರಂದು ದೇಶದಾದ್ಯಂತ ಎಲ್ಲಾ ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು.  ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಕಾರಣದಿಂದ ಈ ಚಿತ್ರದ ಬಿಡುಗಡೆಯ ದಿನವನ್ನು ಮುಂದೂಡಲಾಗಿದೆ ಎನ್ನಲಾಗಿದೆ.

ಈ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ ನಿರ್ಮಾಪಕರು, ಕೊವಿಡ್ ಪ್ರಕರಣಗಳು, ಮುನ್ನೆಚ್ಚರಿಕೆ ಕ್ರಮಗಳು ಮತ್ತು ಲಾಕ್ ಡೌನ್  ನಿಂದಾಗಿ ಏಪ್ರಿಲ್ 23ರಂದು ಚಿತ್ರ ಬಿಡುಗಡೆ ಸಾಧ್ಯವಾಗುತ್ತಿಲ್ಲ. ಸರ್ಕಾರದ ನಿಯಮ ಹಾಗೂ ನಿಬಂಧನೆಗಳಿಗೆ ಬೆಂಬಲ ನೀಡಲು ಬಯಸುತ್ತೇವೆ. ಹೀಗಾಗಿ ತಲೈವಿ ಬಿಡುಗಡೆಯನ್ನು ಮುಂದೂಡುತ್ತಿದ್ದೇವೆ. ಇದಕ್ಕೆ ನಿಮ್ಮೆಲ್ಲರ ಸಹಕಾರಬೇಕು ಎಂದು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಇತರ ಭಾಷೆಗಳ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ ಅಲ್ಲು ಅರ್ಜುನ್