Publish Date: Sat, 10 Apr 2021 (10:34 IST)
Updated Date: Sat, 10 Apr 2021 (10:35 IST)
ಹೈದರಾಬಾದ್ : ಮಾದ್ ರವಿತೇಜ ಅವರ ಮುಂಬರುವ ಆ್ಯಕ್ಷನ್ ಎಂಟರ್ ಟೈನ್ ಮೆಂಟ್ ಖಿಲಾಡಿ ಚಿತ್ರದ ಚಿತ್ರೀಕರಣ ವೇಗವಾಗಿ ನಡೆಯುತ್ತಿದೆ. ಈ ಚಿತ್ರವನ್ನು ಮೇ 28ರಂದು ತೆರೆಗೆ ತರಲು ನಿರ್ಧರಿಸಲಾಗಿದೆ.
ಹೀಗಾಗಿ ಈ ನಡುವೆ ಖಿಲಾಡಿ ಚಿತ್ರದ ಟೀಸರ್ ಬಿಡಿಗಡೆಗೆ ಸಿದ್ಧತೆ ನಡೆಸಲಾಗುತ್ತಿದೆ. ಈ ಬಗ್ಗೆ ನಟ ರವಿತೇಜ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಟೀಸರ್ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿದ್ದಾರೆ. ಅವರು ತಿಳಿಸಿದಂತೆ ಚಿತ್ರದ ಟೀಸರ್ ಏಪ್ರಿಲ್ 12ರಂದು ಬಿಡುಗಡೆಯಾಗಲಿದೆಯಂತೆ.
ಅಕ್ಟೋಬರ್ ನಲ್ಲಿ ರಿಲೀಸ್ ಆದ ಖಿಲಾಡಿ ಚಿತ್ರದ ಫಸ್ಟ್ ಲಿಕ್ ಪೋಸ್ಟರ್ ಜನರ ಮೆಚ್ಚುಗೆ ಪಡೆದು ಭಾರೀ ಯಶಸ್ಸನ್ನು ಗಳಿಸಿತ್ತು. ಇದೀಗ ಟೀಸರ್ ಗೂ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತದೆ ಎಂದು ನಿರ್ಮಾಪಕರು ನಂಬಿದ್ದಾರೆ.