Select Your Language

Notifications

webdunia
webdunia
webdunia
webdunia

ನಾಗಚೈತನ್ಯ-ಸಾಯಿ ಪಲ್ಲವಿ ‘ಲವ್ ಸ್ಟೋರಿ' ಚಿತ್ರ ಬಿಡುಗಡೆ ಮುಂದೂಡಿಕೆ

ನಾಗಚೈತನ್ಯ-ಸಾಯಿ ಪಲ್ಲವಿ ‘ಲವ್ ಸ್ಟೋರಿ' ಚಿತ್ರ ಬಿಡುಗಡೆ ಮುಂದೂಡಿಕೆ
ಹೈದರಾಬಾದ್ , ಶನಿವಾರ, 10 ಏಪ್ರಿಲ್ 2021 (10:11 IST)
ಹೈದರಾಬಾದ್ : ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಕೆಲವು ಚಿತ್ರಗಳ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗುತ್ತಿದೆ. ಅದೇರೀತಿ ಇದೀಗ ಅಕ್ಕಿನೇನಿ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಜೋಡಿಯಾಗಿ ನಟಿಸಿದ ‘ಲವ್ ಸ್ಟೋರಿ’ ಚಿತ್ರದ ಬಿಡುಗಡೆಯ ದಿನಾಂಕನ್ನು ಮುಂದೂಡಲಾಗಿದೆಯಂತೆ.

ಲವ್ ಸ್ಟೋರಿ ಚಿತ್ರವನ್ನು ಈ ಹಿಂದೆ ಏಪ್ರಿಲ್ 2ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದರು. ಬಳಿಕ ಅದನ್ನು ಏಪ್ರಿಲ್ 16ರಂದು ಬಿಡಿಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಇದೀಗ  ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳನ್ನು ನಿಯಂತ್ರಿಸಲು ದೇಶದ ವಿವಿಧ ಭಾಗಗಳಲ್ಲಿ ಹೊಸ ನಿರ್ಬಂಧಗಳು ಮತ್ತು ಲಾಕ್ ಡೌನ್ ಗಳನ್ನು ಜಾರಿಗೊಳಿಸಲಾಗಿದೆ.

 ಈ ಹಿನ್ನಲೆಯಲ್ಲಿ ಚಿತ್ರದ ಬಿಡುಗಡೆ ದಿನವನ್ನು ಮುಂದೂಡಲಾಗಿದೆ ಎಂದು ಗುರುವಾರ ಚಿತ್ರತಂಡ ಪ್ರತಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಆದರೆ ಇನ್ನು ಹೊಸ ದಿನಾಂಕ ನಿಗದಿಯಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಬಾರಿ ಉಪನ್ಯಾಸಕರಾಗಿ ನಟಿಸಲಿದ್ದಾರೆ ಪವನ್ ಕಲ್ಯಾಣ್