Select Your Language

Notifications

webdunia
webdunia
webdunia
webdunia

ಅಲ್ಲು ಅರ್ಜುನ್ ರನ್ನು ಸ್ಟೈಲಿಶ್ ಸ್ಟಾರ್ ಬದಲು 'ಐಕಾನ್ ಸ್ಟಾರ್’ ಎಂದ ನಿರ್ದೇಶಕ

ಅಲ್ಲು ಅರ್ಜುನ್ ರನ್ನು ಸ್ಟೈಲಿಶ್ ಸ್ಟಾರ್ ಬದಲು 'ಐಕಾನ್ ಸ್ಟಾರ್’ ಎಂದ ನಿರ್ದೇಶಕ
ಹೈದರಾಬಾದ್ , ಶುಕ್ರವಾರ, 9 ಏಪ್ರಿಲ್ 2021 (14:07 IST)
ಹೈದರಾಬಾದ್ : ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಚಿತ್ರದ ಟೀಸರ್ ಅಲ್ಲು ಅರ್ಜುನ್ ಜನ್ಮ ದಿನವಾದ ಏಪ್ರಿಲ್ 8ರಂದು ಸಂಜೆ ಬಿಡುಗಡೆ ಮಾಡಲಾಗಿದೆ. ಈ ಟೀಸರ್ ನಲ್ಲಿ ಅಲ್ಲು ಅರ್ಜುನ್ ಅವರ ಹೆಸರಿನ ಮೊದಲು ‘ಸ್ಟೈಲಿಶ್ ಸ್ಟಾರ್’ ಎಂದು ಬರೆಯುವ ಬದಲು ‘ಐಕಾನ್ ಸ್ಟಾರ್’ ಎಂದು ಬದಲಿಸಲಾಗಿದೆ.

ಹೌದು ಪುಷ್ಪಾ ಚಿತ್ರದ 80 ಸೆಕೆಂಡ್ ಟೀಸರ್ ನಲ್ಲಿ  ಸೊಂಪಾದ ಅರಣ್ಯ ಸೆಟ್ಟಿಂಗ್ ನ ನೋಟವಿದೆ. ಇದರಲ್ಲಿ ಅಲ್ಲು ಅರ್ಜುನ್ ಅವರೊಂದಿಗಿನ ಆ್ಯಕ್ಷನ್ ಸನ್ನಿವೇಶಗಳಿವೆ. ಆದರೆ ಈ ಟೀಸರ್ ನಲ್ಲಿ ಅಲ್ಲು ಅರ್ಜುನ್ ಅವರ ಸ್ಟೈಲಿಶ್ ಸ್ಟಾರ್ ಟ್ಯಾಗ್ ಅನ್ನು ಐಕಾನ್ ಸ್ಟಾರ್ ಎಂದು ಬದಲಾಯಿಸಲಾಗಿದೆ.

ಅಲ್ಲು ಅರ್ಜುನ್ ಅವರಿಗೆ ಸ್ಟೈಲಿಶ್ ಸ್ಟಾರ್ ಎಂಬ ಶೀರ್ಷಿಕೆ ಹೇಗೆ ಮತ್ತು ಯಾವಾಗ ನೀಡಿದ್ದರೆಂದು ನನಗೆ ತಿಳಿದಿಲ್ಲ. ಆದರೆ ಪುಷ್ಪಾ ಚಿತ್ರದಲ್ಲಿ ಅವರ ಅಭಿನಯ ನೋಡಿ ಅವರಿಗೂ ಮತ್ತು ಅವರ ಕೌಶಲ್ಯಕ್ಕೂ ಆ ಶೀರ್ಷಿಕೆ ಸರಿಹೊಂದಲ್ಲ. ಹಾಗಾಗಿ ಇಂದಿನಿಂದ ಅವರನ್ನು ಐಕಾನ್ ಸ್ಟಾರ್ ಎಂದು ಕರೆಯಬೇಕು ಎಂದು ನಿರ್ದೇಶಕ ಸುಕುಮಾರ್  ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಅನ್ನು 'ಮೂವಿ ಮಾಫಿಯಾ' ಎಂದು ಕರೆದ ನಟಿ ಕಂಗನಾ