Select Your Language

Notifications

webdunia
webdunia
webdunia
webdunia

ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಹೊಸ ತಂತ್ರ ಬಳಸಿದ ನಟಿ ಲಕ್ಷ್ಮಿ ರಾಯ್

ಹೈದರಾಬಾದ್
ಹೈದರಾಬಾದ್ , ಗುರುವಾರ, 8 ಏಪ್ರಿಲ್ 2021 (15:26 IST)
ಹೈದರಾಬಾದ್ : ಇತ್ತೀಚೆಗೆ ದಕ್ಷಿಣ ಭಾರತದ ಖ್ಯಾತ ನಟಿ ಲಕ್ಷ್ಮಿ ರಾಯ್ ಅವರು ತಮ್ಮ ನಿಶ್ಚಿತಾರ್ಥದ ಬಗ್ಗೆ ತಿಳಿಸುವುದರ ಮೂಲಕ ಪೋಸ್ಟ್ ವೊಂದನ್ನು ಮಾಡಿ ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದ್ದಾರೆ.

ಟ್ವೀಟರ್ ನಲ್ಲಿ ನಟಿ ಲಕ್ಷ್ಮಿ ರಾಯ್, ಬಹಳಷ್ಟು ಜನರು ಬಹಳ ಸಮಯದಿಂದ ನನ್ನನ್ನು ಕೇಳುತ್ತಿದ್ದಾರೆ. ಹಾಗಾಗಿ ಇಂದು ಅವರ ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿದೆ. ಮೊದಲನೇಯದಾಗಿ ನಾನು ನನ್ನ ಸಂಬಂಧವನ್ನು ಮರೆಮಾಚುತ್ತಿಲ್ಲ . ಆದರೆ ನನ್ನ ಸಂಗಾತಿಯ ಯೋಗಕ್ಷೇಮಕ್ಕಾಗಿ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದೇನೆ. ನಾವು ಏಪ್ರಿಲ್ 27, 2021ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು, ಇದಕ್ಕೆ ನನ್ನ ಆಪ್ತ  ಗೆಳೆಯರಿಗೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿದ್ದೇನೆ. ಇದು ಅನಿರೀಕ್ಷಿತವಾಗಿ ನಡೆದಿದ್ದು, ಇದರಿಂದ ನನ್ನ ಕುಟುಂಬ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

ಆದರೆ ತಮ್ಮ ನಿಶ್ಚಿತಾರ್ಥದ ಬಗ್ಗೆ ಇಷ್ಟೆಲ್ಲಾ ಮಾಹಿತಿ ನೀಡಿದ ನಟಿ ಕೊನೆಯಲ್ಲಿ “ ನಿಮ್ಮ ಕೈಗಳನ್ನು ಆಗಾಗ ತೊಳೆಯುತ್ತೀರಿ, ಅವಶ್ಯಕತೆ ಇದ್ದಾಗ ಸ್ಯಾನಿಟೈಸರ್ ಅನ್ನು ಬಳಸಿ  ಎಂಬುದನ್ನು ನೆನಪಿಸಲು ನಾನು ಈ ಪೋಸ್ಟ್ ಅನ್ನು ಬೇರೊಬ್ಬರಿಂದ ಕದ್ದಿದ್ದೇನೆ ಎಂದು  ಬರೆದಿದ್ದಾರೆ. ಆ ಮೂಲಕ ಅವರು ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು  ಈ ತಂತ್ರ ಬಳಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡುಗಡೆಯಾದ ಒಂದೇ ವಾರಕ್ಕೆ ಅಮೆಝೋನ್ ಪ್ರೈಮ್ ನಲ್ಲಿ ಯುವರತ್ನ ಸಿನಿಮಾ