Publish Date: Fri, 09 Apr 2021 (16:56 IST)
Updated Date: Fri, 09 Apr 2021 (16:59 IST)
ಹೈದರಾಬಾದ್ : ತಾವು ಕೊರೊನಾ ಸೋಂಕಿನಿಂದ ಒಳಗಾಗಿಲ್ಲ ಎಂದು ನಟಿ ಅಂಜಲಿ ಅವರು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಟಿ ಅಂಜಲಿ ಅವರು ಜ್ವರದಿಂದ ಬಳಲುತ್ತಿದ್ದು, ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮನೆಯಲ್ಲಿಯೇ ಕ್ವಾರಂಟೈನ್ ಆಗಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ನಟಿ ಅಂಜಲಿ, ನನಗೆ ಕೊರೊನಾ ಸೋಂಕಿ ತಗುಲಿಲ್ಲ. ನಾನು ಸೋಂಕಿಗೆ ಒಳಗಾಗಿದ್ದೇನೆ ಎಂಬ ಮಾಹಿತಿ ಸುಳ್ಳು. ನಾನು ಸುರಕ್ಷಿತ ಮತ್ತು ಆರೋಗ್ಯವಾಗಿದ್ದೀನಿ ಎಂದು ತಿಳಿಸಿದ್ದಾರೆ.