ಹೈದರಾಬಾದ್ : ಅಲ್ಲು ಅರ್ಜುನ್ ಅವರು ಟಾಲಿವುಡ್ ನ ಸ್ಟಾರ್ ನಟರಲ್ಲಿ ಒಬ್ಬರು. ಅವರು ರಾಜ್ಯದಲ್ಲಿ ಮಾತ್ರವಲ್ಲ ದೇಶದ, ವಿದೇಶದಲ್ಲೂ ಕೂಡ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಅವರು ತೆಲುಗು ಚಿತ್ರಗಳ ಬಗ್ಗೆ ಪ್ರೀತಿ ತೋರಿಸಿದ್ದಕ್ಕೆ ದೇಶಾದ್ಯಂತ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಅಲ್ಲು ಅರ್ಜುನ್ ಅವರು ತೆಲುಗು ಚಿತ್ರರಂಗ ಎಲ್ಲಾ ಕಡೆ ಯಶಸ್ಸನ್ನು ಗಳಿಸಿದ್ದಾರೆ. ಇದಕ್ಕೆ ಕಾರಣ ದೇಶಾದ್ಯಂತ ಅಭಿಮಾನಿಗಳು ತೆಲುಗು ಭಾಷಾ ಚಿತ್ರಗಳ ಬಗ್ಗೆ ಪ್ರೀತಿ ತೋರಿಸುತ್ತಿರುವುದು. ಹಾಗಾಗಿ ಇತರ ಭಾಷೆಗಳ ಪ್ರೇಕ್ಷಕರಿಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಧನ್ಯವಾದ ಹೇಳಿದ್ದಾರೆ.
ತಮಿಳು, ಮಲಯಾಳಂ, ಕನ್ನಡ, ಉತ್ತರ ಭಾರತದ ಪ್ರೇಕ್ಷಕರು ಹಾಗೂ ವಿದೇಶದಲ್ಲಿರುವ ಪ್ರೇಕ್ಷಕರಿಗೂ ಅಲ್ಲು ಅರ್ಜುನ್ ಧನ್ಯವಾದ ತಿಳಿಸಿದ್ದಾರೆ ಮತ್ತು ನೀವು ನಮ್ಮೆಲ್ಲರನ್ನು ತುಂಬಾ ಹೆಮ್ಮೆ ಪಡುವಂತೆ ಮಾಡಿದ್ದೀರಿ ಎಂದು ಹೇಳಿದ್ದಾರೆ.