Publish Date: Fri, 19 Feb 2021 (11:30 IST)
Updated Date: Fri, 19 Feb 2021 (11:31 IST)
ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಬಿಡುಗಡೆಯಾಗಿ ಒಂದು ಶೋ ಮುಗಿಯುವುದರೊಳಗೆ ಆನ್ ಲೈನ್ ನಲ್ಲಿ ಸೋರಿಕೆಯಾದ ಮಾಹಿತಿ ಕೇಳಿಬಂದಿದೆ.
ಇತ್ತೀಚೆಗೆ ಯಾವುದೇ ಭಾಷೆಯ ಸಿನಿಮಾವಾದರೂ ಪೈರಸಿಕೋರರ ಕಾಟ ಅತಿಯಾಗಿದೆ. ಇದರಿಂದಾಗಿ ಎಷ್ಟೋ ಸಿನಿಮಾ ನಿರ್ಮಾಪಕರು ಸಂಕಷ್ಟಕ್ಕೀಡಾಗಿದ್ದಾರೆ. ಇದೀಗ ಪೊಗರು ಸಿನಿಮಾಗೂ ಇದೇ ಸಂಕಷ್ಟ ಎದುರಾಗಿದೆ ಎಂಬ ಮಾತುಗಳು ಕೇಳಿಬಂದಿದೆ.