Publish Date: Fri, 19 Feb 2021 (10:04 IST)
Updated Date: Fri, 19 Feb 2021 (10:05 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ರಿಯಲ್ ಜೋಡಿ ದಿಗಂತ್-ಐಂದ್ರಿತಾ ರೇ ಪ್ರೇಮಿಗಳ ದಿನದಂದು ರೊಮ್ಯಾಂಟಿಕ್ ಆಗಿ ಕಳೆದಿದ್ದಾರೆ. ಈ ಫೋಟೋವನ್ನು ಐಂದ್ರಿತಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.
ದಿಗಂತ್ ಜೊತೆ ರೊಮ್ಯಾಂಟಿಕ್ ಆಗಿ ಕ್ಯಾಂಡಲ್ ಲೈಟ್ ನಲ್ಲಿ ಲಿಪ್ ಲಾಕ್ ಮಾಡುತ್ತಿರುವ ದೃಶ್ಯವನ್ನು ಐಂದ್ರಿತಾ ಪ್ರಕಟಿಸಿದ್ದಾರೆ. ಆದರೆ ಮುಂದಿನ ಫೋಟೋಗಳಲ್ಲಿ ತಮಗೆ ಡಿಸ್ಟರ್ಬ್ ಮಾಡಲು ಬಂದ ನಾಯಿಗಳನ್ನು ತೋರಿಸಿದ್ದು, ಇವರು ನಮಗೆ ಡಿಸ್ಟರ್ಬ್ ಮಾಡಿದರು ಎಂದು ಹೇಳಿಕೊಂಡಿದ್ದಾರೆ. ಇನ್ನು, ದಿಗ್ಗ-ಆಂಡಿ ಲಿಪ್ ಲಾಕ್ ದೃಶ್ಯ ನೋಡಿದ ನೆಟ್ಟಿಗರು ಸದ್ಯದಲ್ಲೇ ಗುಡ್ ನ್ಯೂಸ್ ಗ್ಯಾರಂಟಿ ಎಂದು ಕಾಲೆಳೆದಿದ್ದಾರೆ.