Select Your Language

Notifications

webdunia
webdunia
webdunia
webdunia

ಪುಷ್ಪ 2 ಟೀಸರ್ ನಲ್ಲಿ ಶ್ರೀವಲ್ಲಿ, ಫಹಾದ್ ಮಿಸ್ಸಿಂಗ್! ಫ್ಯಾನ್ಸ್ ಬೇಸರ

ಪುಷ್ಪ 2 ಟೀಸರ್ ನಲ್ಲಿ ಶ್ರೀವಲ್ಲಿ, ಫಹಾದ್ ಮಿಸ್ಸಿಂಗ್! ಫ್ಯಾನ್ಸ್ ಬೇಸರ
ಹೈದರಾಬಾದ್ , ಶನಿವಾರ, 8 ಏಪ್ರಿಲ್ 2023 (07:40 IST)
ಹೈದರಾಬಾದ್: ಅಲ್ಲು ಅರ್ಜುನ್ ಹುಟ್ಟುಹಬ್ಬದ ನಿಮಿತ್ತ ನಿನ್ನೆ ಸಂಜೆ ಪುಷ್ಪ 2 ಸ್ಪೆಷಲ್ ಟೀಸರ್ ಬಿಡುಗಡೆಯಾಗಿದೆ. ಆದರೆ ಈ ಟೀಸರ್ ತುಂಬಾ ಪುಷ್ಪ ನೇ ಆವರಿಸಿಕೊಂಡಿದ್ದಾರೆ.

ಪುಷ್ಪ 2 ನಲ್ಲಿ ಅಲ್ಲು ಅರ್ಜುನ್ ಪಾತ್ರದಷ್ಟೇ ಫಹಾದ್ ಫಾಸಿಲ್ ನಿರ್ವಹಿಸಿದ್ದ ಎಸ್ಪಿ ಬನ್ವರ್ ಸಿಂಗ್ ಮತ್ತು ರಶ್ಮಿಕಾ ನಿರ್ವಹಿಸಿದ್ದ ಶ್ರೀವಲ್ಲಿ ಪಾತ್ರ ಕೂಡಾ ಹಿಟ್ ಆಗಿತ್ತು.

ಪುಷ್ಪ 2 ಟೀಸರ್ ನಲ್ಲಿ ಈ ಎರಡು ಪಾತ್ರಗಳು ಇರಬಹುದು ಎಂದು ಫ್ಯಾನ್ಸ್ ನಿರೀಕ್ಷಿಸಿದ್ದರು. ಆದರೆ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಪ್ರಮುಖ ಪಾತ್ರಧಾರಿಯಾಗಿರುವ ಅಲ್ಲು ಅರ್ಜುನ್ ಹೊರತುಪಡಿಸಿ ಉಳಿದ ಯಾವುದೇ ಪಾತ್ರಧಾರಿಗಳನ್ನೂ ಟೀಸರ್ ನಲ್ಲಿ ತೋರಿಸಿಲ್ಲ. ಹೀಗಾಗಿ ಇನ್ನೊಮ್ಮೆ ಎಲ್ಲಾ ಪಾತ್ರಗಳನ್ನೊಳಗೊಂಡ ಟೀಸರ್ ಹೊರಬೀಳಬಹುದು ಎಂಬ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಖುಷ್ಬೂ ಸುಂದರ್ ಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು