Publish Date: Thu, 06 Apr 2023 (17:32 IST)
Updated Date: Thu, 06 Apr 2023 (17:34 IST)
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ನಲ್ಲಿದ್ದಾರೆ ಎಂದು ಕೆಲವು ಸಮಯದಿಂದ ಸುದ್ದಿ ಹರಿದಾಡುತ್ತಲೇ ಇದೆ.
ಇದೀಗ ರಶ್ಮಿಕಾ ನಿನ್ನೆ ತಮ್ಮ ಬರ್ತ್ ಡೇ ಸಂದರ್ಭದಲ್ಲಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಲು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದರು. ಈ ವೇಳೆ ರಶ್ಮಿಕಾ ಇರುವ ಮನೆಯ ತಾರಸಿ ಹಾಗೂ ಕೆಲವು ದಿನಗಳ ಮೊದಲು ವಿಜಯ್ ದೇವರಕೊಂಡ ಪೋಸ್ ಕೊಟ್ಟಿದ್ದ ಮನೆಯ ತಾರಸಿಯೂ ಒಂದೇ ರೀತಿಯಿತ್ತು. ಜೊತೆಗೆ ರಶ್ಮಿಕಾ ಬೆರಳಲ್ಲಿ ಉಂಗುರವೊಂದು ಇದ್ದು, ಇದನ್ನು ವಿಜಯ್ ಗಿಫ್ಟ್ ಮಾಡಿರಬೇಕು ಎಂದು ಡಿಜಿಟಲ್ ಮೀಡಿಯಾ ಹೆಸರಿನ ಟ್ವಿಟರ್ ಖಾತೆದಾರರೊಬ್ಬರು ಪ್ರತಿಕ್ರಿಯಿಸಿದ್ದಾನೆ.
ಇದಕ್ಕೆ ಉತ್ತರಿಸಿರುವ ರಶ್ಮಿಕಾ ಅಯ್ಯೋ.. ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಬಾಬೂ.. ಎಂದಿದ್ದಾರೆ. ಕೆಲವು ದಿನಗಳ ಮೊದಲು ರಶ್ಮಿಕಾ ಮಾಲ್ಡೀವ್ಸ್ ಗೆ ಪ್ರವಾಸ ಮಾಡಿದ್ದಾಗಲೂ ವಿಜಯ್ ಜೊತೆಗಿದ್ದರು ಎಂಬುದನ್ನು ನೆಟ್ಟಿಗರು ಫೋಟೋ ನೋಡಿ ಗುರುತಿಸಿದ್ದರು.