Publish Date: Wed, 05 Apr 2023 (09:00 IST)
Updated Date: Wed, 05 Apr 2023 (09:02 IST)
ಹೈದರಾಬಾದ್: ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಇಂದು ಜನ್ಮದಿನದ ಸಂಭ್ರಮ. ಕಿರಿಕ್ ಬೆಡಗಿ ಈಗ 27 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.
ರಶ್ಮಿಕಾ ಹುಟ್ಟುಹಬ್ಬಕ್ಕೆ ಪುಷ್ಪ 2 ಸಿನಿಮಾ ತಂಡ ವಿಶೇಷ ಅಪ್ ಡೇಟ್ ನೀಡುತ್ತಿದೆ. ಈ ವಿಶೇಷ ಸುದ್ದಿ ಇಂದು ಬೆಳಿಗ್ಗೆ 11.07 ಕ್ಕೆ ಪ್ರಕಟವಾಗಲಿದೆ.
ಕಿರಿಕ್ ಪಾರ್ಟಿ ಎಂಬ ಕನ್ನಡ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ರಶ್ಮಿಕಾ ಇಂದು ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಇದುವರೆಗೆ 18 ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಈಗ ನಾಲ್ಕು ಸಿನಿಮಾಗಳಲ್ಲಿ ಏಕಕಾಲಕ್ಕೆ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಬ್ಯುಸಿಯೆಷ್ಟ್ ನಟಿಯೆನಿಸಿಕೊಂಡಿರುವ ರಶ್ಮಿಕಾಗೆ ಹ್ಯಾಪೀ ಬರ್ತ್ ಡೇ.
Krishnaveni K
Publish Date: Wed, 05 Apr 2023 (09:00 IST)
Updated Date: Wed, 05 Apr 2023 (09:02 IST)