ಬೆಂಗಳೂರು: ವಿಕ್ರಾಂತ್ ರೋಣ ಬಳಿಕ ಕಿಚ್ಚ ಸುದೀಪ್ ಯಾವುದೇ ಸಿನಿಮಾ ಘೋಷಿಸಿಲ್ಲ. ಇದೀಗ ಬರೋಬ್ಬರಿ ಒಂದು ವರ್ಷದ ಬ್ರೇಕ್ ತೆಗೆದುಕೊಂಡಿದ್ದಾರೆ. ಇದರ ನಡುವೆ ಅಭಿಮಾನಿಗಳು ಅವರ ಮುಂದಿನ ಸಿನಿಮಾ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ.
ಕೊನೆಗೂ ಸ್ವತಃ ಸುದೀಪ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಟ್ವಿಟರ್ ಮೂಲಕ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. ನನ್ನ ಮುಂದಿನ ಸಿನಿಮಾ ಬಗ್ಗೆ ನೀವು ಮಾಡುವ ಮೆಮೆಗಳು, ಟ್ವೀಟ್ ಗಳು ಎಲ್ಲವೂ ನನಗೆ ಅರ್ಥವಾಗುತ್ತದೆ. ಹೀಗಾಗಿ ಒಂದು ಸ್ಪಷ್ಟನೆ ಕೊಡಲು ಬಯಸುತ್ತೇನೆ.
ವಿಕ್ರಾಂತ್ ರೋಣ ಬಳಿಕ ನಾನು ಸುದೀರ್ಘ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದೆ. ಇದರ ನಡುವೆ ಬಿಗ್ ಬಾಸ್ ಬಂದಿದ್ದರಿಂದ ಬ್ರೇಕ್ ತೆಗೆದುಕೊಳ್ಳಬೇಕಾಯಿತು. ಜೊತೆಗೆ ನಾನು ಇಷ್ಟಪಡುವ ಕ್ರಿಕೆಟ್ ನಲ್ಲಿ ಮುಳುಗಿ ಹೋಗಿದ್ದೆ. ಸದ್ಯಕ್ಕೆ ನಾನು ಮೂರು ಕತೆಗಳನ್ನು ಫೈನಲ್ ಮಾಡಿದ್ದೇನೆ. ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಆದರೆ ಈ ಕತೆಗಳಿಗೆ ಭಾರೀ ಸಿದ್ಧತೆ ಬೇಕಾಗಿದೆ. ಮೂರೂ ತಂಡಗಳೂ ಅದರ ತಯಾರಿಯಲ್ಲಿದೆ. ಸದ್ಯದಲ್ಲೇ ಸಿನಿಮಾ ಘೋಷಣೆ ಮಾಡುತ್ತೇನೆ ಎಂದಿದ್ದಾರೆ ಸುದೀಪ್.