Publish Date: Fri, 07 Apr 2023 (09:00 IST)
Updated Date: Fri, 07 Apr 2023 (09:20 IST)
ಹೈದರಾಬಾದ್: ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ನಟನಾಗುವ ಬದಲು ಹೋಟೆಲ್ ಉದ್ಯಮಿಯಾಗಲು ಬಯಸಿದ್ದರಂತೆ.
ಪ್ರಭಾಸ್ ತಂದೆ ವಿತರಕರಾಗಿ, ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದವರು. ಆದರೂ ಅವರಿಗೆ ನಟನಾಗುವ ಆಸಕ್ತಿಯಿರಲಿಲ್ಲ. ಆದರೆ ಅವರ ಮಾವ ನಟನಾಗಿದ್ದರಿಂದ 19 ನೇ ವಯಸ್ಸಿಗೂ ಅವರೂ ನಟನಾಗಲು ತೀರ್ಮಾನಿಸಿದರು.
ಆದರೆ ಅದಕ್ಕೆ ಮೊದಲು ಅವರು ಹೋಟೆಲ್ ಉದ್ಯಮಿಯಾಗಬೇಕು ಎಂದು ಬಯಸಿದ್ದರಂತೆ. ಈಗಲೂ ಪ್ರಭಾಸ್ ಆ ಫ್ಯಾಶನ್ ಬಿಟ್ಟಿಲ್ಲ. ತಮ್ಮ ಸೆಟ್ ನಲ್ಲಿ ಈಗಲೂ ಮನೆ ಆಹಾರ ತಯಾರಿಸಿ ಉಣಬಡಿಸುವುದು ಎಂದರೆ ಅವರಿಗೆ ಪ್ರಿಯವಾದ ಕೆಲಸ.