Publish Date: Fri, 07 Apr 2023 (20:38 IST)
Updated Date: Fri, 07 Apr 2023 (20:39 IST)
ಹೈದರಾಬಾದ್: ಬಹುಭಾಷಾ ನಟಿ ಖುಷ್ಬೂ ಅನಾರೋಗ್ಯದಿಂದ ಬಳಲುತ್ತಿದ್ದ ಹೈದರಾಬಾದ್ ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕನ್ನಡ, ತಮಿಳು, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ನಟಿ ತಮ್ಮ ಅನಾರೋಗ್ಯದ ಬಗ್ಗೆ ತಾವೇ ಖುದ್ದಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿರುವ ಕಾರಣ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವುದಾಗಿ ಫೋಟೋ ಸಮೇತ ಖುಷ್ಬೂ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯೂ ಆಗಿರುವ ಖುಷ್ಬೂ ಅನಾರೋಗ್ಯದ ಬಗ್ಗೆ ತಿಳಿಸುತ್ತಿದ್ದಂತೇ ಅಭಿಮಾನಿಗಳು ಆತಂಕಗೊಂಡು ಸಂದೇಶ ಕಳುಹಿಸಿದ್ದಾರೆ.