Publish Date: Thu, 16 Jun 2022 (09:40 IST)
Updated Date: Thu, 16 Jun 2022 (09:48 IST)
ಹೈದರಾಬಾದ್: ಇತ್ತೀಚೆಗಷ್ಟೇ ಬಹುಕಾಲದ ಗೆಳೆಯ, ನಿರ್ದೇಶಕ ವಿಘ‍್ನೇಶ್ ಶಿವನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ನಯನತಾರಾ ಇನ್ನೇನು ಫ್ಯಾಮಿಲಿ ಟೈಂ ಮುಗಿಸಿ ವೃತ್ತಿ ಜೀವನಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ.
ಈ ನಡುವೆ ನಯನತಾರಾ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಮದುವೆ ಆದ ಮೇಲೆ ತನ್ನನ್ನು ಹಾಕಿಕೊಂಡು ಸಿನಿಮಾ ಮಾಡುವ ನಿರ್ಮಾಪಕರಿಗೆ ನಯನತಾರಾ ಹೊಸ ಷರತ್ತು ಹಾಕುತ್ತಿದ್ದಾರೆ ಎನ್ನಲಾಗಿದೆ.
ಮೊದಲನೆಯದಾಗಿ ಹೀರೋ ಜೊತೆ ತೀರಾ ಆಪ್ತ ಸನ್ನಿವೇಶಗಳಿಬಾರದು. ಎರಡನೆಯದಾಗಿ ಕಿಸ್ಸಿಂಗ್ ದೃಶ್ಯಗಳಿರಬಾರದು ಎಂದು ನಯನತಾರಾ ಬೇಡಿಕೆಯಿಡುತ್ತಿದ್ದಾರಂತೆ. ಅಲ್ಲದೆ, ನಿರಂತರವಾಗಿ ಶೂಟಿಂಗ್ ಗೆ ಡೇಟ್ಸ್ ಕೊಡಲು ಸಾಧ‍್ಯವಿಲ್ಲ ಎಂದೂ ಡಿಮ್ಯಾಂಡ್ ಮಾಡಿದ್ದಾರಂತೆ. ಇದೆಲ್ಲಾ ಕೇಳಿ ನಿರ್ಮಾಪಕರು ಈಗ ಅದಕ್ಕೆ ತಕ್ಕ ಹಾಗೆ ಹೊಂದಾಣಿಕೆ ಮಾಡಲು ಪ್ರಯತ್ನಿಸುತ್ತಿದ್ದಾರಂತೆ.