Select Your Language

Notifications

webdunia
webdunia
webdunia
webdunia

ಬಾಲಿವುಡ್ ಗೆ ಸಕ್ಸಸ್ ತಂದುಕೊಡಲು ದಕ್ಷಿಣದತ್ತ ಮುಖ ಮಾಡಿದ ಶಾರುಖ್ ಖಾನ್

ಮುಂಬೈ , ಗುರುವಾರ, 16 ಜೂನ್ 2022 (09:10 IST)
ಮುಂಬೈ: ಇತ್ತೀಚೆಗಿನ ದಿನಗಳಲ್ಲಿ ದಕ್ಷಿಣ ಭಾರತೀಯ ಸಿನಿಮಾಗಳ ಮುಂದೆ ಬಾಲಿವುಡ್‍ ನ ಘಟಾನುಘಟಿಗಳ ಸಿನಿಮಾಗಳೂ ನೆಲಕಚ್ಚುತ್ತಿವೆ. ಈ ಹಿನ್ನಲೆಯಲ್ಲಿ ದಕ್ಷಿಣ ಭಾರತದಲ್ಲೂ ಮಾರುಕಟ್ಟೆ ಕಂಡುಕೊಳ್ಳಲು ಬಾಲಿವುಡ್ ಇಲ್ಲಿನ ಸಿನಿಮಾಗಳ ಕಡೆ ಮುಖ ಮಾಡುತ್ತಿವೆ.

ಅದರಲ್ಲೂ ವಿಶೇಷವಾಗಿ ಝೀರೋ ಸೋಲಿನ ಬಳಿಕ ಎಚ್ಚೆತ್ತುಕೊಂಡಿದ್ದ ಶಾರುಖ್ ಈಗ ದಕ್ಷಿಣ ಭಾರತದ ನಿರ್ದೇಶಕ, ಹೀರೋಯಿನ್ ಜೊತೆಗೆ ಕೆಲಸ ಮಾಡುತ್ತಿದ್ದು, ತಮ್ಮ ಸಿನಿಮಾವನ್ನು ಇಲ್ಲಿನ ಭಾಷೆಗಳಲ್ಲೂ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

ಜವಾನ್ ಸಿನಿಮಾದಲ್ಲಿ ಶಾರುಖ್ ಗೆ ಆಕ್ಷನ್ ಕಟ್ ಹೇಳುತ್ತಿರುವುದು ಟಾಲಿವುಡ್ ನಿರ್ದೇಶಕ ಅಟ್ಲಿ, ಹೀರೋಯಿನ್ ಟಾಲಿವುಡ್ ಸುಂದರಿ ನಯನತಾರಾ. ಅಷ್ಟೇ ಅಲ್ಲದೆ, ಸಾಮಾನ್ಯವಾಗಿ ಬಾಲಿವುಡ್ ಸಿನಿಮಾಗಳು ದಕ್ಷಿಣದ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿದ್ದುದೇ ಅಪರೂಪ. ಈಗ ಜವಾನ್ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ಈ ಮೂಲಕ ದಕ್ಷಿಣ ಭಾರತೀಯ ಸಿನಿ ಪ್ರೇಕ್ಷಕರನ್ನು ಸೆಳೆಯಲು ಶಾರುಖ್ ಕಸರತ್ತು ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶ್ ಮುಂದಿನ ಸಿನಿಮಾಗೆ ಕೇಳಿಬರುತ್ತಿದೆ ಮತ್ತೊಬ್ಬ ಸೌತ್ ಸುಂದರಿ ಹೆಸರು