Select Your Language

Notifications

webdunia
webdunia
webdunia
webdunia

ಯಶ್ ಮುಂದಿನ ಸಿನಿಮಾಗೆ ಕೇಳಿಬರುತ್ತಿದೆ ಮತ್ತೊಬ್ಬ ಸೌತ್ ಸುಂದರಿ ಹೆಸರು

ಯಶ್ ಮುಂದಿನ ಸಿನಿಮಾಗೆ ಕೇಳಿಬರುತ್ತಿದೆ ಮತ್ತೊಬ್ಬ ಸೌತ್ ಸುಂದರಿ ಹೆಸರು
ಬೆಂಗಳೂರು , ಗುರುವಾರ, 16 ಜೂನ್ 2022 (08:20 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಮುಂದಿನ ಸಿನಿಮಾ ಇನ್ನೂ ಘೋಷಣೆಯೇ ಆಗಿಲ್ಲ. ಆದರೆ ಕೆಜಿಎಫ್ ಸ್ಟಾರ್ ಮುಂದಿನ ಸಿನಿಮಾ ಬಗ್ಗೆ ದಿನಕ್ಕೊಂದು ರೂಮರ್ ಕೇಳಿಬರುತ್ತಿದೆ.

ಮುಫ್ತಿ ನಿರ್ದೇಶಕ ನರ್ತನ್ ಜೊತೆಗೆ ಯಶ್ ಮುಂದಿನ ಸಿನಿಮಾ ಎನ್ನುವುದು ಪಕ್ಕಾ ಆಗಿದೆ. ಈ ಸಿನಿಮಾವೂ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಈ ಸಿನಿಮಾಗೆ ಯಶ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆಯವರನ್ನು ಕರೆತರಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಈ ಮೊದಲು ಸುದ್ದಿಯಾಗಿತ್ತು. ಇದೀಗ ಇನ್ನೊಬ್ಬ ಸೌತ್ ಸುಂದರಿ ತಮನ್ನಾ ಭಾಟಿಯಾ ಹೆಸರು ಕೇಳಿಬರುತ್ತಿದೆ. ತಮನ್ನಾ ಕೆಜಿಎಫ್ 1 ರಲ್ಲಿ ಹಾಡೊಂದರಲ್ಲಿ ಯಶ್ ಜೊತೆ ಹೆಜ್ಜೆ ಹಾಕಿದ್ದರು. ಇತ್ತ ಪೂಜಾ ಬ್ಯುಸಿಯಾಗಿರುವುದರಿಂದ ತಮನ್ನಾ ನಾಯಕಿಯಾದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ರಿಲೀಸ್ ಗೂ ಮುನ್ನವೇ ಭರ್ಜರಿ ಮೊತ್ತಕ್ಕೆ ಹಿಂದಿಗೆ ಸೇಲ್ ಆದ ಕನ್ನಡ ಸಿನಿಮಾ