Select Your Language

Notifications

webdunia
webdunia
webdunia
webdunia

ಬಿಡುಗಡೆಗೆ ಸಿದ್ಧವಾಗಿ ನಿಂತಿರುವ ಡಾಲಿ ಧನಂಜಯ್ ಸಿನಿಮಾಗಳು

ಬಿಡುಗಡೆಗೆ ಸಿದ್ಧವಾಗಿ ನಿಂತಿರುವ ಡಾಲಿ ಧನಂಜಯ್ ಸಿನಿಮಾಗಳು
ಬೆಂಗಳೂರು , ಬುಧವಾರ, 15 ಜೂನ್ 2022 (11:05 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಪೋಷಕ ನಟನಾಗಿ ಬಂದು ಇಂದು ನಾಯಕ ನಟನಾಗಿ, ನಿರ್ಮಾಪಕನಾಗಿ ಮಿಂಚುತ್ತಿರುವ ಡಾಲಿ ಧನಂಜಯ್ ಅವರ ಸಾಲು ಸಾಲು ಸಿನಿಮಾಗಳು ಇಂದು ಬಿಡುಗಡೆಗೆ ಸಿದ್ಧವಾಗಿದೆ.

ಈ ವರ್ಷ ಧನಂಜಯ್ ನಾಯಕರಾಗಿದ್ದ ಟ್ವೆಂಟಿ ಒನ್ ಅವರ್ ಈಗಾಗಲೇ ಬಿಡುಗಡೆಯಾಗಿದೆ. ಇದೀಗ 6 ಸಿನಿಮಾಗಳು ಮುಂದಿನ ಡಿಸೆಂಬರ್ ಒಳಗಾಗಿ ಬಿಡುಗಡೆಗೆ ಸಿದ್ಧವಾಗಿ ನಿಂತಿವೆ.

ಶಿವರಾಜ್ ಕುಮಾರ್ ನಾಯಕರಾಗಿರುವ ಭೈರಾಗಿ, ನವರಸನಾಯಕ ಜಗ್ಗೇಶ್ ನಾಯಕರಾಗಿರುವ ತೋತಾಪುರಿಯಲ್ಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈ ಸಿನಿಮಾಗಳು ಜುಲೈ ಮತ್ತು ಆಗಸ್ಟ್ ನಲ್ಲಿ ಬಿಡುಗಡೆಯಾಗುತ್ತಿವೆ. ಇದಲ್ಲದೆ ತಾವೇ ನಾಯಕರಾಗಿರುವ ಮಾನ್ಸೂನ್ ರಾಗ ಆಗಸ್ಟ್ ನಲ್ಲಿ, ಹೆಡ್ ಬುಷ್ ಅಕ್ಟೋಬರ್ ನಲ್ಲಿ ಬಿಡುಗಡೆ ದಿನಾಂಕ ಘೋಷಣೆ ಮಾಡಿವೆ. ಇದಲ್ಲದೆ ಹೊಯ್ಸಳ, ಒನ್ಸ್ ಅಪಾನ್ ಟೈಮ್ ಇನ್ ಜಮಾಲಿಗುಡ್ಡ ಕೂಡಾ ಇದೇ ಡಿಸೆಂಬರ್ ಒಳಗಾಗಿ ಬಿಡುಗಡೆಯಾಗಲಿವೆ. ಈ ಮೂಲಕ ಧನಂಜಯ್ ಈ ವರ್ಷದ ಮಟ್ಟಿಗೆ ಪ್ರೇಕ್ಷಕರಿಗೆ ಒಂದಾದ ಮೇಲೊಂದರಂತೆ ಸಿನಿಮಾ ಕೊಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಗೆ ಬರಬಹುದಾದ ಹಳೆಯ ಹೀರೋಯಿನ್ ಗಳ ಪುತ್ರಿಯರು