Select Your Language

Notifications

webdunia
webdunia
webdunia
webdunia

ಚಾರ್ಲಿ ಸಿನಿಮಾ ಪ್ರೇರಣೆಯಿಂದ ಬೀದಿ ನಾಯಿಗಳ ದತ್ತು ಅಭಿಯಾನ ಶುರು

ಚಾರ್ಲಿ ಸಿನಿಮಾ ಪ್ರೇರಣೆಯಿಂದ ಬೀದಿ ನಾಯಿಗಳ ದತ್ತು ಅಭಿಯಾನ ಶುರು
ಬೆಂಗಳೂರು , ಸೋಮವಾರ, 13 ಜೂನ್ 2022 (09:10 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ನಿರ್ಮಿಸಿ, ನಟಿಸಿರುವ 777 ಚಾರ್ಲಿ ಎಂಬ ಸಿನಿಮಾ ಎಷ್ಟೋ ಬದಲಾವಣೆಗೆ ಕಾರಣವಾಗಿದೆ.

ಶ್ವಾನ ಪ್ರಿಯರಿಗೆ ಇಷ್ಟವಾಗುವ ಕತೆ ಹೊಂದಿರುವ ಚಾರ್ಲಿ ಸಿನಿಮಾದಿಂದ ಪ್ರೇರಣೆಯಾಗಿ ಈಗ ಬೀದಿ ನಾಯಿಗಳ ದತ್ತು ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ.

ಸ್ವತಃ ಚಾರ್ಲಿ ಸಿನಿಮಾ ತಂಡ ಎನ್ ಜಿಒ ಸಹಯೋಗದೊಂದಿಗೆ ಬೀದಿ ನಾಯಿಗಳ ದತ್ತು ಸ್ವೀಕಾರ ಅಭಿಯಾನಕ್ಕೆ ಚಾಲನೆ ನೀಡಿತ್ತು. ಸಿನಿಮಾ ವೀಕ್ಷಿಸಿದ ಪ್ರೇಕ್ಷಕರಲ್ಲಿ ಕೆಲವರಿಗಾದರೂ ಬೀದಿ ನಾಯಿಗಳ ಬಗ್ಗೆ ಇರುವ ದೃಷ್ಟಿಕೋನವೇ ಬದಲಾಗಿದೆ ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

9 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಕಬ್ಜ