ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅಮೂಲ್ಯ ಎರಡು ತಿಂಗಳ ಮೊದಲು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಇದುವರೆಗೆ ಮಕ್ಕಳ ಫೋಟೋ ಹಂಚಿಕೊಂಡಿರಲಿಲ್ಲ.
ಆದರೆ ಇದೀಗ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಇಬ್ಬರು ಮಕ್ಕಳ ಕಾಲಿನ ಫೋಟೋ ಪ್ರಕಟಿಸುವ ಮೂಲಕ ಮೊದಲ ಬಾರಿಗೆ ಮಕ್ಕಳ ಬಗ್ಗೆ ಬ್ಲೆಸ್ಡ್ ಎಂದು ಬರೆದುಕೊಂಡಿದ್ದಾರೆ.
ಎರಡು ತಿಂಗಳ ಮೊದಲು ಅಮೂಲ್ಯ-ಜಗದೀಶ್ ದಂಪತಿ ಇಬ್ಬರು ಗಂಡು ಮಕ್ಕಳಿಗೆ ಪೋಷಕರಾಗಿದ್ದರು. ಇದಾದ ಬಳಿಕ ಇತ್ತೀಚೆಗಷ್ಟೇ ಅಮೂಲ್ಯ ಗ್ರಾಮದೇವತೆ ಪೂಜೆಗೆ ಬಂದಿದ್ದಾಗ ಮಕ್ಕಳ ಸಮೇತ ಕ್ಯಾಮರಾ ಕಣ್ಣಿಗೆ ಬಿದ್ದಿದ್ದರು.