Select Your Language

Notifications

webdunia
webdunia
webdunia
webdunia

ಬರ್ತ್ ಡೇ ಆಚರಿಸಲು ವಿದೇಶಕ್ಕೆ ಹಾರಿದ ಡಾರ್ಲಿಂಗ್ ಕೃಷ್ಣ ದಂಪತಿ

ಬರ್ತ್ ಡೇ ಆಚರಿಸಲು ವಿದೇಶಕ್ಕೆ ಹಾರಿದ ಡಾರ್ಲಿಂಗ್ ಕೃಷ್ಣ ದಂಪತಿ
ಬೆಂಗಳೂರು , ಶನಿವಾರ, 11 ಜೂನ್ 2022 (09:20 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಭರವಸೆಯ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಜೂನ್ 12 ರಂದು ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ.

ಈ ವಿಶೇಷ ಕ್ಷಣವನ್ನು ವಿಶೇಷವಾಗಿ ಕಳೆಯಲು ಡಾರ್ಲಿಂಗ್ ಕೃಷ್ಣ ದಂಪತಿ ವಿದೇಶ ಪ್ರವಾಸಕ್ಕೆ ತೆರಳಿದೆ. ಮಿಲನಾ ಮತ್ತು ಕೃಷ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಜೆ ಕಳೆಯಲು ಹೊರಟಿರುವುದಾಗಿ ವಿಮಾನದಲ್ಲಿ ಕೂತಿರುವ ಫೋಟೋ ಪ್ರಕಟಿಸಿದ್ದಾರೆ.

ಜೂನ್ 12 ರಂದು ಕೃಷ್ಣ ಜನ್ಮದಿನವಿದ್ದು, ಈ ಕ್ಷಣವನ್ನು ದಂಪತಿ ವಿಶೇಷವಾಗಿ ಆಚರಿಸಲಿದ್ದಾರೆ. ಇದೇ ದಿನ ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ‘ದಿಲ್ ಪಸಂದ್’ ಸಿನಿಮಾದ ಫಸ್ಟ್ ಲುಕ್ ಉಡುಗೊರೆಯಾಗಿ ಸಿಗಲಿದೆ. ಈ ಸಿನಿಮಾದಲ್ಲಿ ಕೃಷ್ಣಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲಯಾಳಂ ನಟ ಪೃಥ್ವಿರಾಜ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲಂಸ್