Select Your Language

Notifications

webdunia
webdunia
webdunia
webdunia

ಚಾರ್ಲಿ ನಾಯಿಗೂ ಬಂತು ಅಭಿಮಾನಿಗಳ ಸಂಘ!

ಚಾರ್ಲಿ ನಾಯಿಗೂ ಬಂತು ಅಭಿಮಾನಿಗಳ ಸಂಘ!
ಬೆಂಗಳೂರು , ಶುಕ್ರವಾರ, 10 ಜೂನ್ 2022 (09:40 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ಮತ್ತು ಚಾರ್ಲಿ ಎಂಬ ನಾಯಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 777 ಚಾರ್ಲಿ ಸಿನಿಮಾ ಇಂದಿನಿಂದ ಥಿಯೇಟರ್ ನಲ್ಲಿ ಪ್ರದರ್ಶನವಾಗುತ್ತಿದೆ.

ಈ ಸಿನಿಮಾ ಕ್ರೇಜ್ ಎಷ್ಟಿದೆಯೆಂದರೆ ಈಗ ಚಾರ್ಲಿ ನಾಯಿಗೆ ಅಭಿಮಾನಿಗಳ ಸಂಘವೊಂದು ಸೃಷ್ಟಿಯಾಗಿದೆ! ಸಾಮಾಜಿಕ ಜಾಲತಾಣದಲ್ಲಿ ಚಾರ್ಲಿ ಅಭಿಮಾನಿಗಳ ಸಂಘದ ಪ್ಲೆಕ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಚಿಕ್ಕಬಳ್ಳಾಪುರದ ಭುವನೇಶ್ವರಿ ವೃತ್ತದಲ್ಲಿ ಚಾರ್ಲಿ ಅಭಿಮಾನಿಗಳ ಸಂಘ ಸೃಷ್ಟಿಯಾಗಿದೆ. ವಿಶೇಷವೆಂದರೆ ಈ ಚಾರ್ಲಿ ಅಭಿಮಾನಿಗಳ ಸಂಘಕ್ಕೆ ರಾಯನ್ ಅಧ‍್ಯಕ್ಷ, ರಾಕಿ ಉಪಾಧ್ಯಕ್ಷ! ಒಟ್ಟಾರೆ ನಾಯಿಗಳೇ ಸಂಘದ ಸದಸ್ಯರು! ಈ ಒಂದು ಪೋಸ್ಟ್ ಈಗ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ, ಮಕ್ಕಳ ಜೊತೆ ರಾಕಿಂಗ್ ಸ್ಟಾರ್ ಯಶ್ ರಜಾ ಮಜಾ