Select Your Language

Notifications

webdunia
webdunia
webdunia
webdunia

ಚಾರ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್: ಚಾರ್ಲಿ ಜೊತೆ ಕೂತು ಸಿನಿಮಾ ವೀಕ್ಷಿಸಿದ ರಕ್ಷಿತ್ ಶೆಟ್ಟಿ

ಚಾರ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್: ಚಾರ್ಲಿ ಜೊತೆ ಕೂತು ಸಿನಿಮಾ ವೀಕ್ಷಿಸಿದ ರಕ್ಷಿತ್ ಶೆಟ್ಟಿ
ಬೆಂಗಳೂರು , ಶುಕ್ರವಾರ, 10 ಜೂನ್ 2022 (16:43 IST)
ಬೆಂಗಳೂರು: ಇಂದು ಬಿಡುಗಡೆಯಾಗಿರುವ 777 ಚಾರ್ಲಿ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನಿಮಾ ವೀಕ್ಷಿಸಿದವರೆಲ್ಲರೂ ರಕ್ಷಿತ್ ಶೆಟ್ಟಿ ಕಮ್ ಬ್ಯಾಕ್ ಎಂದು ಹಾಡಿಹೊಗಳುತ್ತಿದ್ದಾರೆ.

ದ್ವಿತೀಯಾರ್ಧದಲ್ಲಿ ಚಾರ್ಲಿ ಪ್ರೇಕ್ಷಕರನ್ನು ಅಳಿಸುತ್ತಾನೆ. ಕ್ಲೈಮ್ಯಾಕ್ಸ್ ಅಂತೂ ಸೂಪರ್ ಎಂದು ಸಿನಿಮಾ ನೋಡಿದ ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು, ಇಂದು ಮೊದಲ ದಿನದ ಶೋವನ್ನು ಇಡೀ ಚಾರ್ಲಿ ತಂಡ ಜೊತೆಯಾಗಿ ಕೂತು ವೀಕ್ಷಿಸಿದೆ. ಅದರಲ್ಲೂ ರಕ್ಷಿತ್ ಮತ್ತು ಚಾರ್ಲಿ ಜೊತೆಯಾಗಿ ಕೂತು ತಮ್ಮ ಸಿನಿಮಾ ವೀಕ್ಷಿಸಿದ್ದು ವಿಶೇಷ. ಇನ್ನು, ಸಿನಿಮಾ ವೀಕ್ಷಿಸಿದ ರಕ್ಷಿತ್ ತಾಯಿ ಥಿಯೇಟರ್ ನಲ್ಲಿ ಕಣ್ಣೀರು ಹಾಕಿದ್ದಾರೆ. ಮಕ್ಕಳಿಂದ ಹಿಡಿದು ಎಲ್ಲಾ ವರ್ಗದವರೂ ಆರಾಮವಾಗಿ ಕೂತು ನೋಡಬಹುದಾದ ಸಿನಿಮಾ ಇದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾರ್ಲಿ ಬೆಸ್ಟ್ ಫ್ರೆಂಡ್ ಬಹುಭಾಷಾ ನಟಿ ಸಾಯಿ ಪಲ್ಲವಿ!