ಬೆಂಗಳೂರು: 777 ಚಾರ್ಲಿ ಇಂದಿನಿಂದ ಥಿಯೇಟರ್ ನಲ್ಲಿ ಬಿಡುಗಡೆಯಾಗಿದ್ದು, ಕನ್ನಡ ಸಿನಿಮಾ ರಂಗವನ್ನು ಮತ್ತೆ ಹೆಮ್ಮೆಪಡುವಂತೆ ಮಾಡಿದೆ.
ರಕ್ಷಿತ್ ಶೆಟ್ಟಿ ನಿರ್ಮಿಸಿ ನಟಿಸಿರುವ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಅಲ್ಲಿಯೂ ಮೋಡಿ ಮಾಡುತ್ತಿದೆ. ಸಿನಿಮಾದಲ್ಲಿ ರಕ್ಷಿತ್ ಗಿಂತ ಚಾರ್ಲಿ ನಾಯಿಯೇ ಎಲ್ಲರ ಅಚ್ಚುಮೆಚ್ಚಾಗಿದೆ.
ಇದೀಗ ಚಾರ್ಲಿ ಬಹುಭಾಷಾ ನಟಿ ಸಾಯಿ ಪಲ್ಲವಿಗೂ ಫ್ರೆಂಡ್ ಆಗಿಬಿಟ್ಟಿದ್ದಾಳೆ. ಸಾಯಿ ಪಲ್ಲವಿ ಮಡಿಲಲ್ಲಿ ಚಾರ್ಲಿ ಹಾಯಾಗಿ ಮಲಗಿ ನಿದ್ರಿಸುತ್ತಿರುವ ಫೋಟೋ ಪ್ರಕಟಿಸಿರುವ ಪರಂವಾ ಸಂಸ್ಥೆ ಸಾಯಿ ಪಲ್ಲವಿಯ ಬೆಸ್ಟ್ ಫ್ರೆಂಡ್ ಆಗಿದ್ದಾಳೆ ಚಾರ್ಲಿ ಎಂದಿದೆ.