Select Your Language

Notifications

webdunia
webdunia
webdunia
webdunia

ಹಣ ಪೀಕುವ ದಂಧೆಗೆ ಇಳಿದಿರುವ ಒಟಿಟಿ ಫ್ಲ್ಯಾಟ್ ಫಾರಂಗಳು: ನೆಟ್ಟಿಗರ ಆಕ್ರೋಶ

ಹಣ ಪೀಕುವ ದಂಧೆಗೆ ಇಳಿದಿರುವ ಒಟಿಟಿ ಫ್ಲ್ಯಾಟ್ ಫಾರಂಗಳು: ನೆಟ್ಟಿಗರ ಆಕ್ರೋಶ
ಬೆಂಗಳೂರು , ಶುಕ್ರವಾರ, 10 ಜೂನ್ 2022 (08:50 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಮನೆಯಲ್ಲೇ ಕೂತು ಮೆಚ್ಚಿನ ಸಿನಿಮಾಗಳನ್ನು ನೋಡಲು ಪ್ರೇಕ್ಷಕರಿಗೆ ನೆರವಾಗಿದ್ದು ಒಟಿಟಿ ಫ್ಲ್ಯಾಟ್ ಫಾರಂಗಳು. ಆದರೆ ಈಗ ಅವುಗಳು ಹಣ ವಸೂಲಿ ದಂಧೆಗಿಳಿದಿವೆ.

ಲಾಕ್ ಡೌನ್ ಬಳಿಕ ಹೆಚ್ಚಿನ ಒಟಿಟಿ ವೆಬ್ ತಾಣಗಳು ಚಂದಾದಾರರಿಗೆ ಬಿಲ್ ಹೆಚ್ಚಿಸಿ ಶಾಕ್ ಕೊಟ್ಟಿತ್ತು. ಇದಾದ ಬಳಿಕ ಈಗ ಚಂದಾದಾರರಾದರೂ ಕೆಲವು ಹಿಟ್ ಸಿನಿಮಾಗಳನ್ನು ಉಚಿತವಾಗಿ ನೀಡದೇ ಅದಕ್ಕೆ ಹೆಚ್ಚುವರಿ ಹಣ ಪಾವತಿಸಿ ವೀಕ್ಷಿಸಲು ಕೇಳುತ್ತಿವೆ.

ಇದರಿಂದಾಗಿ ವಾರ್ಷಿಕವಾಗಿ ಒಂದು ಸಾವಿರ ರೂ.ಗಿಂತ ಅಧಿಕ ಬಿಲ್ ಪಾವತಿಸಿದರೂ ಕೆಲವು ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸುವ ಅವಕಾಶ ಸಿಗುತ್ತಿಲ್ಲ. ಮತ್ತಷ್ಟು ಹಣ ಪೀಕುತ್ತಿರುವುದರಿಂದ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಉದಾಹರಣೆಗೆ ಇತ್ತೀಚೆಗೆ ಅಮೆಝೋನ್ ಪ್ರೈಮ್ ವಾರ್ಷಿ ಚಂದಾ ಹಣವನ್ನು 1499 ರೂ.ಗೆ ಏರಿಕೆ ಮಾಡಿದೆ. ಹಾಗಿದ್ದರೂ ಇತ್ತೀಚೆಗೆ ಬಿಡುಗಡೆಗೊಂಡ ಕೆಲವು ಹಿಟ್ ಸಿನಿಮಾಗಳನ್ನು ವೀಕ್ಷಿಸಲು ಹೆಚ್ಚುವರಿ ಹಣ ಪಾವತಿಸಬೇಕು. ಇದು ಅನ್ಯಾಯ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸಬರ ಸಿನಿಮಾಗೆ ಸಾಥ್ ಕೊಟ್ಟು ಅಬ್ಬಬ್ಬ ಎಂದ್ರು ಕಿಚ್ಚ ಸುದೀಪ್