Publish Date: Sat, 11 Jun 2022 (18:03 IST)
Updated Date: Sat, 11 Jun 2022 (18:05 IST)
ಬೆಂಗಳೂರು: ನಿನ್ನೆಯಷ್ಟೇ ಕಿಚ್ಚ ಸುದೀಪ್ ತಮಗೆ ರಾಜಸ್ಥಾನ್ ರಾಯಲ್ಸ್ ಬ್ಯಾಟಿಗ ಜೋಸ್ ಬಟ್ಲರ್ ನೀಡಿದ ಬ್ಯಾಟ್ ನ್ನು ತೋರಿಸಿ ಖುಷಿಪಟ್ಟಿದ್ದರು. ಇದೀಗ ಕಿಚ್ಚನಿಂದ ರಾಜಸ್ಥಾನ್ ತಂಡ ಅಮೂಲ್ಯ ಉಡುಗೊರೆಯೊಂದನ್ನು ಕೇಳಿದೆ.
ಸುದೀಪ್ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ನಾಯಕ ಕಮ್ ವಿಕೆಟ್ ಕೀಪರ್ ಆಗಿ ಆಡಿದ್ದರು. ಈ ಹಿಂದೆ ಸುದೀಪ್ ಆಡುವಾಗ ತೊಟ್ಟಿದ್ದ ಗ್ಲೌಸ್ ಒಂದನ್ನು ರಾಜಸ್ಥಾನ್ ತಂಡ ಉಡುಗೊರೆಯಾಗಿ ಕೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್, ಇದನ್ನು ಹೇಗೆ ನಿಮಗೆ ತಲುಪಿಸಲಿ ಎಂದು ತಿಳಿಸಿದರೆ ಸಾಕು, ಆ ಕ್ಷಣವೇ ಈ ಗ್ಲೌಸ್ ನಿಮ್ಮ ಬಳಿಯಿರುತ್ತದೆ ಎಂದಿದ್ದಾರೆ.