ನವದೆಹಲಿ: ಇಂಗ್ಲೆಂಡ್ ವಿರುದ್ಧ ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಎರಡನೇ ಟೆಸ್ಟ್ ವೇಳೆ ನ್ಯೂಜಿಲೆಂಡ್ ಬ್ಯಾಟಿಗ ಡ್ಯಾರಿಲ್ ಮಿಚೆಲ್ ಹೊಡೆದ ಸಿಕ್ಸರ್ ಗೆ ಮಹಿಳಾ ಅಭಿಮಾನಿಯೊಬ್ಬರ ಬಿಯರ್ ಗ್ಲಾಸ್ ಒಡೆದು ಹೋಗಿದೆ. ಬಳಿಕ ಮಿಚೆಲ್ ಮಾಡಿದ್ದೇನು ಗೊತ್ತಾ?
81 ರನ್ ಗಳ ಇನಿಂಗ್ಸ್ ಆಡಿದ ಮಿಚೆಲ್ ಹೊಡೆದ ಸಿಕ್ಸರ್ ಒಂದನ್ನು ಗ್ಯಾಲರಿಯಲ್ಲಿ ಬಿಯರ್ ಹೀರುತ್ತಾ ಪಂದ್ಯ ವೀಕ್ಷಿಸುತ್ತಿದ್ದ ಮಹಿಳಾ ಅಭಿಮಾನಿಯತ್ತ ಸಾಗಿತ್ತು. ಚೆಂಡು ನೇರವಾಗಿ ಬಿಯರ್ ಗ್ಲಾಸ್ ಗೆ ತಗುಲಿದ ಪರಿಣಾಮ ಅದು ಒಡೆದೇ ಹೋಯ್ತು.
ಬಳಿಕ ಮಿಚೆಲ್ ಆ ಮಹಿಳೆಯ ಕ್ಷಮೆ ಯಾಚಿಸಿದ್ದಲ್ಲದೆ ಬದಲಿಯಾಗಿ ಮತ್ತೊಂದು ಗ್ಲಾಸ್ ಬಿಯರ್ ಒದಗಿಸಿಕೊಟ್ಟರು. ಮಿಚೆಲ್ ರ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.