ನವದೆಹಲಿ: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ನಾಯಕನಾಗಿ ಮೊದಲ ಬಾರಿಗೆ ಟೀಂ ಇಂಡಿಯಾ ಮುನ್ನಡೆಸಿದ ರಿಷಬ್ ಪಂತ್ ಬೇಡದ ದಾಖಲೆ ಮೈಮೇಲೆಳೆದುಕೊಂಡಿದ್ದಾರೆ.
ನಿನ್ನೆಯ ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್ ಗಳಿಂದ ಸೋತಿದೆ. ಇದರೊಂದಿಗೆ ಮೊದಲ ಪಂದ್ಯದಲ್ಲೇ ಸೋತು ವಿರಾಟ್ ಕೊಹ್ಲಿ ಬಳಿಕ ಈ ಬೇಡದ ದಾಖಲೆ ಮಾಡಿದ ಕುಖ್ಯಾತಿಗೆ ರಿಷಬ್ ಪಂತ್ ಒಳಗಾದರು.
ವಿರಾಟ್ ಕೊಹ್ಲಿ 2017 ರಲ್ಲಿ ಟಿ20 ಕ್ರಿಕೆಟ್ ನ ನಾಯಕರಾಗಿ ಇಂಗ್ಲೆಂಡ್ ವಿರುದ್ಧ ಕಾನ್ಪುರದಲ್ಲಿ ಆಡಿದ್ದ ಮೊದಲ ಪಂದ್ಯದಲ್ಲೇ ಸೋತಿದ್ದರು. ಇದೀಗ ಕೊಹ್ಲಿ ಸಾಲಿಗೆ ರಿಷಬ್ ಕೂಡಾ ಸೇರಿದ್ದಾರೆ.