Select Your Language

Notifications

webdunia
webdunia
webdunia
webdunia

ರನ್ ಹೊಳೆ ಹರಿಸಿದ ಟೀಂ ಇಂಡಿಯಾ ಬ್ಯಾಟಿಗರು

ರನ್ ಹೊಳೆ ಹರಿಸಿದ ಟೀಂ ಇಂಡಿಯಾ ಬ್ಯಾಟಿಗರು
ನವದೆಹಲಿ , ಗುರುವಾರ, 9 ಜೂನ್ 2022 (20:45 IST)
ನವದೆಹಲಿ: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಗರು ಅಬ್ಬರಿಸಿದ್ದು, 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿದರು.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಆಫ್ರಿಕನ್ನರ ಬೌಲಿಂಗ್ ದಾಳಿಯನ್ನು ಟೀಂ ಇಂಡಿಯಾ ಬ್ಯಾಟಿಗರು ಪುಡಿಗಟ್ಟಿದರು. ಅದರಲ್ಲೂ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ಭಾರತದ ಮೊತ್ತವನ್ನು 200 ಗಡಿ ದಾಟಿಸಿತು. ಇಶಾನ್ 48 ಎಸೆತಗಳಿಂದ 76, ಋತುರಾಜ್ ಗಾಯಕ್ ವಾಡ್ 15 ಎಸೆತಗಳಿಂದ 23, ಶ್ರೇಯಸ್ ಅಯ್ಯರ್ 27 ಎಸೆತಗಳಿಂದ 36, ರಿಷಬ್ ಪಂತ್ 16 ಎಸೆತಗಳಿಂದ 29 ರನ್ ಹಾಗೂ ಹಾರ್ದಿಕ್ ಪಾಂಡ್ಯ ಕೇವಲ 12 ಎಸೆತಗಳಿಂದ 32 ರನ್ ಚಚ್ಚಿ ಅಜೇಯರಾಗುಳಿದರು.

ಆಫ್ರಿಕಾ ಪರ ಕೇಶವ್ ಮಹಾರಾಜ್, ಅನ್ ರಿಚ್ ನೋರ್ಜೆ ವೇಯ್ನ್ ಪರ್ನೆಲ್ ಮತ್ತು ಪ್ರಿಟೋರಿಯಸ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ ಸ್ಟಾಗ್ರಾಂನಲ್ಲಿ ದಾಖಲೆ ಮಾಡಿದ ವಿರಾಟ್ ಕೊಹ್ಲಿ