Publish Date: Thu, 09 Jun 2022 (09:00 IST)
Updated Date: Thu, 09 Jun 2022 (09:24 IST)
ನವದೆಹಲಿ: ದ.ಆಫ್ರಿಕಾ ವಿರುದ್ಧದ ಇಂದಿನ ಟಿ20 ಪಂದ್ಯವನ್ನು ಟೀಂ ಇಂಡಿಯಾ ಗೆದ್ದರೆ ವಿಶ್ವದಾಖಲೆಯಾಗಲಿದೆ.
ಇದುವರೆಗೆ ಟೀಂ ಇಂಡಿಯಾ ಕಳೆದ 12 ಪಂದ್ಯಗಳಲ್ಲಿ ಸತತವಾಗಿ ಗೆದ್ದು ಅಫ್ಘಾನಿಸ್ತಾನ, ರೊಮೇನಿಯಾ ಜೊತೆಗೆ ಸತತ ಗೆಲುವಿನ ದಾಖಲೆ ಮಾಡಿದೆ.
ಒಂದು ವೇಳೆ ಇಂದಿನ ಪಂದ್ಯ ಗೆದ್ದರೆ ಟೀಂ ಇಂಡಿಯಾ ಸತತವಾಗಿ 13 ಪಂದ್ಯಗಳನ್ನು ಗೆದ್ದು ವಿಶ್ವದಾಖಲೆ ಮಾಡಲಿದೆ. ಈ ಬಗ್ಗೆ ಮಾತನಾಡಿರುವ ಕೋಚ್ ರಾಹುಲ್ ದ್ರಾವಿಡ್, ನಾವು ವಿಶ್ವದಾಖಲೆಗಳ ಬಗ್ಗೆ ಚಿಂತಿಸುತ್ತಿಲ್ಲ. ಗೆಲುವು ಪಡೆಯುವುದು ನಮಗೆ ಖುಷಿಯ ವಿಚಾರವೇ. ಆದರೆ ನಮ್ಮ ಯೋಚನೆ ಉತ್ತಮವಾಗಿ ಆಡುವುದರ ಮೇಲಷ್ಟೇ ಇರುತ್ತದೆ ಎಂದಿದ್ದಾರೆ.