Publish Date: Wed, 08 Jun 2022 (11:00 IST)
Updated Date: Wed, 08 Jun 2022 (11:11 IST)
ನವದೆಹಲಿ: ಐಪಿಎಲ್ 2022 ರಲ್ಲಿ ಮಿಂಚಿ ಈಗ ಟೀಂ ಇಂಡಿಯಾಗೆ ಅವಕಾಶ ಪಡೆದಿರುವ ಯುವ ವೇಗಿ ಉಮ್ರಾನ್ ಮಲಿಕ್ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಮಹತ್ವದ ಹೇಳಿಕೆ ನೀಡಿದ್ದಾರೆ.
ನಾಳೆಯಿಂದ ದ.ಆಫ್ರಿಕಾ ವಿರುದ್ಧ ಟಿ20 ಸರಣಿ ನಡೆಯಲಿದ್ದು, ಉಮ್ರಾನ್ ಮಲಿಕ್ ಕೂಡಾ ತಂಡದಲ್ಲಿದ್ದಾರೆ. ಆದರೆ ಕೋಚ್ ದ್ರಾವಿಡ್ ಮಾತು ಕೇಳಿದರೆ ಅವರಿಗೆ ಆಡುವ ಅವಕಾಶ ಸಿಗುವ ಸಾಧ‍್ಯತೆ ಕಡಿಮೆ.
ಉಮ್ರಾನ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ದ್ರಾವಿಡ್ ಉಮ್ರಾನ್, ಅರ್ಷ್ ದೀಪ್ ಸಿಂಗ್ ನೆಟ್ಸ್ ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಆದರೆ ಈ ಯುವ ಪ್ರತಿಭೆಗಳು ಮತ್ತಷ್ಟು ಪಳಗಬೇಕು. ಆಗ ಅವರು ಮತ್ತಷ್ಟು ಸುಧಾರಿಸುತ್ತಾರೆ. ಸದ್ಯಕ್ಕೆ ಈ ಯುವ ಪ್ರತಿಭೆಗಳು ನಮ್ಮ ಪಾಲಿಗೆ ಪ್ಲಸ್ ಪಾಯಿಂಟ್ ಎಂದಿದ್ದಾರೆ ದ್ರಾವಿಡ್. ಆದರೆ ನಾಳೆಯ ಪಂದ್ಯದಲ್ಲಿ ಹರ್ಷಲ್ ಪಟೇಲ್, ಆವೇಶ್ ಖಾನ್ ಮತ್ತು ಭುವನೇಶ್ವರ್ ಕುಮಾರ್ ಗೆ ಅವಕಾಶ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ. ಹೀಗಾಗಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಲು ಕಾಯುತ್ತಿರುವ ಉಮ್ರಾನ್ ಕೆಲವು ದಿನ ಕಾಯಬೇಕಾಗಬಹುದು.