Publish Date: Tue, 07 Jun 2022 (11:07 IST)
Updated Date: Tue, 07 Jun 2022 (08:55 IST)
ಮುಂಬೈ: ದ.ಆಫ್ರಿಕಾ ವಿರುದ್ಧದ ಟಿ20 ಸರಣಿಯ ಅರ್ಧದಲ್ಲೇ ಕೋಚ್ ರಾಹುಲ್ ದ್ರಾವಿಡ್ ತಂಡದಿಂದ ಹೊರನಡೆದು ಇಂಗ್ಲೆಂಡ್ ಗೆ ತೆರಳಲಿದ್ದಾರೆ ಎಂಬ ಸುದ್ದಿಗಳಿತ್ತು. ಅದೀಗ ಸುಳ್ಳಾಗಿದೆ.
ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಟೆಸ್ಟ್ ಪಂದ್ಯವಾಡಬೇಕಿದೆ. ಹೀಗಾಗಿ ಇದಕ್ಕೆ ಮೊದಲು ಅಭ್ಯಾಸ ಪಂದ್ಯವಾಡಲಿದ್ದು, ಅದಕ್ಕೂ ಮೊದಲೇ ರಾಹುಲ್ ದ್ರಾವಿಡ್ ಇಂಗ್ಲೆಂಡ್ ತೆರಳಿ ಸಿದ್ಧತೆ ಆರಂಭಿಸಲಿದ್ದಾರೆ ಎನ್ನಲಾಗಿತ್ತು.
ಆದರೆ ಈಗ ಬಿಸಿಸಿಐ ಮೂಲಗಳೇ ಸ್ಪಷ್ಟನೆ ನೀಡಿದ್ದು, ದ.ಆಫ್ರಿಕಾ ಸರಣಿಯೂ ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಮಹತ್ವದ್ದಾಗಿರುವುದರಿಂದ ಈ ಸರಣಿಯಲ್ಲಿ ದ್ರಾವಿಡ್ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಜೂನ್ 20 ರಂದು ಇಂಗ್ಲೆಂಡ್ ಗೆ ತೆರಳಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೇವಲ ಐರ್ಲೆಂಡ್ ಸರಣಿಗೆ ಮಾತ್ರ ವಿವಿಎಸ್ ಲಕ್ಷ್ಮಣ್ ತಂಡದ ಕೋಚ್ ಆಗಿರುತ್ತಾರೆ.